ಲಾಕ್‌ ಡೌನ್‌ ಹೊತ್ತಲ್ಲಿ ಮೆಹೆಂದಿ ಚಿಂತೆ

ಕರಾವಳಿಯಲ್ಲಿ ಮೊದಲ ಕೊರೊನಾ ಸೋಂಕು ಧೃಡಪಟ್ಟಿದ್ದ ಉಡುಪಿ ಜಿಲ್ಲೆ ಇದೀಗ ಸಂಪೂರ್ಣ ಕೊರೊನಾ ಸೋಂಕು ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.

ಜಿಲ್ಲಾಡಳಿತದ ಅವಿರತ ಪರಿಶ್ರಮ ,ಕಟ್ಟುನಿಟ್ಟಿನ ಕ್ರಮ ಫಲ ನೀಡಿದ್ದು ಇದೀಗ ಉಡುಪಿ ಜಿಲ್ಲೆ ಸಂಪೂರ್ಣ ಕೊರೊನಾ ಮುಕ್ತ ಜಿಲ್ಲೆಯೆಂಬ ಖ್ಯಾತಿಗೆ ಪಾತ್ರವಾಗಿದ್ದು, ಇದೀಗ ಉಡುಪಿ ಜಿಲ್ಲೆಯ ಜನತೆ ಸ್ವಲ್ಪ ಎಚ್ಚರ ತಪ್ಪಿದರೂ ಕೋರೋನಾ ಮರುಕಳಿಸುವ ಸಾಧ್ಯತೆ ಇದೆ.

ಆದರೆ ಇದೇ ನೆಪದಲ್ಲಿ ಬಿಜೆಪಿ ಮಹಿಳಾ ಮೋರ್ಚ ಕಾರ್ಕಳ ಇವರುಗಳ ವತಿಯಿಂದ “ಕೊರೋನಾ ಹೋರಾಟ”ದ ಜೊತೆಗಿದ್ದೇವೆ ಎಂಬ ಸಂದೇಶ ಸಾರಲು ಮೆಹೆಂದಿ ಹಚ್ಚುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಅದೇನೇ ಇರಲಿ ಸರ್ಕಾರದ ಆದೇಶವನ್ನು ಮರೆಯದೆ ಜನರು ತಮ್ಮ ಅಕ್ಕಪಕ್ಕದ ಜನರನ್ನೆಲ್ಲಾ ಕರೆದು ಮೆಹೆಂದಿ ಹಚ್ಚದೇ, ನಿಮ್ಮ ಮನೆಯಲ್ಲೇ ಕುಳಿತು ನೀವು ಮೆಹೆಂದಿ ಹಚ್ಚಿ ಸ್ಪರ್ಧೆಯಲ್ಲಿ ಭಾಗವಹಿಸಿ, ಕೊರೋನಾ ಸೋಂಕು ಮತ್ತೆ ಹರಡದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here