ಲಾಕ್‌ ಡೌನ್‌ ಹೊತ್ತಲ್ಲಿ ಈ ʼಕಾಡುಮನುಷ್ಯʼನನ್ನು ನೋಡಲು ಮರೆಯದಿರಿ..!

ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ನಮ್ಮ ಭವಿಷ್ಯ ಏನು, ಮುಂದೇನು ಕೆಲಸ ಎಂಬ ಯೋಚನೆ ಹಲವರಿಗೆ. ಬಿಸಿನೆಸ್ ಮಾಡುವವರಿಗೆ ಬಂಡವಾಳದ ಚಿಂತೆ, ಮಕ್ಕಳಿಗೆ ವಿದ್ಯಾಭ್ಯಾಸ ಚಿಂತೆ.

ಹೀಗೆ ಎಲ್ಲರೂ ಚಿಂತೆಯಲ್ಲಿ ಇರುವಾಗ ‘ಟೀಂ ರಾಕೆಟ್’ ಚಿತ್ರ ತಂಡವು ವಿಭಿನ್ನವಾಗಿ ಯೋಚಿಸಿದೆ. ನಮ್ಮ ಭವಿಷ್ಯದ ಜೊತೆಗೆ ಮೂಕ ಪ್ರಾಣಿಗಳ ಜೀವನದ ಬಗ್ಗೆಯೂ ಚಿಂತಿಸಿದೆ. ಅವುಗಳಿಗೆ ಆಹಾರದ ಸಮಸ್ಯೆ ಬಾರದಿರಲಿ ನಾಡಿಗೆ ಬಂದು ತೊಂದರೆ ಆಗದಿರಲಿ ಎಂಬ ನಿಟ್ಟಿನಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ.

ಈ ಕಿರುಚಿತ್ರವನ್ನು ಬಿಡುಗಡೆಗೊಳಿಸಿದ ಕಾರ್ಕಳದ ಶಾಸಕ ಸುನೀಲ್‌ ಕುಮಾರ್‌ ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಕೆಲವೇ ನಿಮಿಷಗಳಲ್ಲಿ ಇಡೀ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವ ಈ ಕಿರುಚಿತ್ರವಾಗಿದೆ.

ಪರಿಸರದ ಬಗ್ಗೆ ಜಾಗೃತಿ ಇಂದು ಎಲ್ಲರ ಮನೆಗಳಲ್ಲಿ ಆಗಬೇಕಾಗಿದೆ, ಆ ಕುರಿತಂತೆ ಬೀಜದುಂಡೆಗಳನ್ನು ಎಸೆಯುವ ಮೂಲಕ ಹೊಸ ರೂಪದ ಗಿಡಗಳನ್ನು ಬೆಳೆಸೋಣ ಎಂಬ ಉತ್ತಮ ಸಂದೇಶವನ್ನು ಈ ಚಿತ್ರತಂಡವು ನೀಡಿದೆ. ಇದು ಕೇವಲ ಒಂದು ಕಿರುಚಿತ್ರ ಆಗದೇ ಇದು ಜನಜೀವನದಲ್ಲಿ ಹಾಸುಹೊಕ್ಕಾಬೇಕು, ನಮ್ಮ ನಡವಳಿಕೆಯಲ್ಲಿ ಇದು ಬರಬೇಕೆಂದು ಹೇಳುತ್ತಾ  ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕರಾವಳಿಯ ಉದಯೋನ್ಮುಖ ನಟ ಶ್ರೀ ಬಂಗೇರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ದಿನಕರ್‌ ಜಿ ಅವರ ನಿರ್ದೇಶನದ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ‘ಕಾಡು ಮನುಷ್ಯ’ ಕನ್ನಡ ಕಿರುಚಿತ್ರವನ್ನು ಜಯವರ್ಧನ್‌ ಅವರು ನಿರ್ಮಿಸಿದ್ದಾರೆ. ಈ  ಕಿರು ಚಿತ್ರದಲ್ಲಿ ಅಬೂಬಕ್ಕರ್‌, ಜೀವನ್‌ ಕೋಟ್ಯಾನ್‌,ರಂಜಿತ್‌ ಕುಮಾರ್‌,ಇಶಾನ್‌ ಡಿ ಪೂಜಾರಿ ಮುಖ್ಯ ಪಾತ್ರದಲ್ಲಿ ಇದ್ದಾರೆ.

ಈ ಚಿತ್ರಕ್ಕೆ ವಿಶುವಲ್‌ ಇಫೆಕ್ಟ್ಸ್ ದೀಕ್ಷಿತ್‌ ಕುಮಾರ್‌ ಉಪ್ಪಳ, ರಾಬಿನ್‌ ರೈ ಮತ್ತು ರಿಯಾಝ್‌ ಅಹಮದ್ ಛಾಯಾಗ್ರಹಣ, ಸುನದ್‌ ಗೌತಮ್‌ ಸಂಗೀತ ಸಂಯೋಜನೆ, ಡಿಜಿಟಲ್‌ ಇಂಟರ್‌ ಮೀಡಿಯೇಟ್‌ ಶಿಶಿರ್‌ ಶೆಟ್ಟಿ ಮತ್ತು ಸುಕೇಶ್‌ ಶೆಟ್ಟಿ, ಶಂಕರ್‌ ನಾರಾಯಣ್‌ ಸಂಕಲನಕ್ಕೆ ಕೈ ಜೋಡಿಸಿದ್ದಾರೆ.

ಲಾಕ್‌ ಡೌನ್‌ನ ಈ ಸಂದರ್ಭದಲ್ಲಿ ಈ‌ ಚಿತ್ರ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ನೀಡಿದೆ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here