ಲಾಕ್‌ಡೌನ್‌ ಹೊರತಾಗಿಯೂ ಕರ್ನಾಟಕದಲ್ಲಿ ಐದೇ ದಿನಕ್ಕೆ ಕೊರೋನಾ ಕೇಸ್‌ ಡಬಲ್‌..!

ಪ್ರಾತಿನಿಧಿಕ ಚಿತ್ರ

ಲಾಕ್‌ಡೌನ್‌ ಹೊರತಾಗಿಯೂ ಕರ್ನಾಟಕದಲ್ಲಿ ಕೊರೋನಾ ಮಹಾಮಾರಿ ಅಬ್ಬರ ತೀವ್ರಗೊಂಡಿದ್ದು ಇವತ್ತು ಒಂದೇ ದಿನ 36 ಹೊಸ ಕೇಸ್‌ಗಳು ವರದಿ ಆಗಿವೆ.

ಆಘಾತಕಾರಿ ಸಂಗತಿ ಎಂದರೆ ಏಪ್ರಿಲ್‌ 12ರಿಂದ ಅಂದರೆ ಇದೇ ಭಾನುವಾರದಿಂದ ಇವತ್ತಿನವರೆಗೆ ಐದೇ ಐದು ದಿನದಲ್ಲಿ ಕೊರೋನಾ ರೋಗಿಗಳ ಸಂಖ್ಯೆ 101ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್‌ 11ರಂದು ಕರ್ನಾಟಕದಲ್ಲಿ ಕೊರೋನಾ ರೋಗಿಗಳ ಸಂಖ್ಯೆ 214 ಇತ್ತು. ಇವತ್ತು 315ಕ್ಕೆ ಏರಿದೆ.

ಇವತ್ತು ವರದಿ ಆದ ವಿಜಯಪುರ – 7, ಬೆಳಗಾವಿ-17, ಮೈಸೂರು -3 (ನಂಜನಗೂಡಿನ ಔಷಧ ಕಂಪನಿಯ ನೌಕರ), ಬೆಂಗಳೂರು ನಗರ-5, ಕಲ್ಬುರ್ಗಿ – 1, ಗದಗ-1 ಪ್ರಕರಣಗಳು ಒಳಗೊಂಡಿವೆ.

ಇನ್ನು ಕೊರೋನಾಗೆ ಮೃತಪಟ್ಟವರ ಸಂಖ್ಯೆಯೂ ದ್ವಿಗುಣಗೊಂಡಿದೆ. ಏಪ್ರಿಲ್‌ 12ಕ್ಕೆ 6 ಮಂದಿ ಮೃತಪಟ್ಟಿದ್ರೆ ಏಪ್ರಿಲ್‌ 16ಕ್ಕೆ 13 ಜನ ಸಾವನ್ನಪ್ಪಿದ್ದಾರೆ.

ಮಾರ್ಚ್‌ 3ರಂದು ಕರ್ನಾಕಟದಲ್ಲಿ ಮೊದಲ ಕೊರೋನಾ ಪಾಸಿಟಿವ್‌ ಕೇಸ್‌ ವರದಿ ಆಗಿತ್ತು. ಇದಾದ ಬಳಿಕ ಮಾರ್ಚ್‌ 31ಕ್ಕೆ ಕೊರೋನಾ ರೋಗಿಗಳ ಸಂಖ್ಯೆ 100ರ ಗಡಿ ದಾಟಿತ್ತು. ಅಂದರೆ 28 ದಿನಗಳ ಬಳಿಕ. ಏಪ್ರಿಲ್‌ 1ರಿಂದ ಏಪ್ರಿಲ್‌ 10ರ ನಡುವೆ 100ರಷ್ಟು ಏರಿಕೆ ಕಂಡಿತ್ತು. ಏಪ್ರಿಲ್‌ 10ರಂದು ಕರ್ನಾಟಕದಲ್ಲಿ ಕೊರೋನಾ ರೋಗಿಗಳ ಸಂಖ್ಯೆ 207ಕ್ಕೆ ಏರಿಕೆ ಆಗಿತ್ತು. ಏಪ್ರಿಲ್‌ 14ರಂದು 214ಕ್ಕೆ ಏರಿಕೆ ಆಗಿತ್ತು. ಇವತ್ತು 315ಕ್ಕೆ ಹೆಚ್ಚಳವಾಗಿದೆ.

ಅಂದರೆ ಲಾಕ್‌ಡೌನ್‌ ಘೋಷಣೆ ಆಗಿ 23 ದಿನದ ಬಳಿಕವೂ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ದ್ವಿಗುಣ ಆಗುತ್ತಿದೆ. ಕೊರೋನಾ ಹಬ್ಬುತ್ತಿರುವ ಅವಧಿ ಎರಡು ಪಟ್ಟು ಇಳಿಮುಖವಾಗುತ್ತಿದೆ. ಅಂದರೆ 28 ದಿನಗಳಿಂದ 10 ದಿನಕ್ಕೆ, 10 ದಿನಗಳಿಂದ ಐದೇ ದಿನಕ್ಕೆ.

LEAVE A REPLY

Please enter your comment!
Please enter your name here