ಲಾಕ್‌ಡೌನ್‌ ಹೊತ್ತಲ್ಲಿ ಭಾರತದಲ್ಲಿ ಶ್ರೀಮಂತ ಆದ ಏಕೈಕ ವ್ಯಕ್ತಿ ಇವರೇ..! ಯಾರು ಗೊತ್ತಾ..?

ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ. ಆದರೆ ಬಂದ್‌ ಹೊತ್ತಲ್ಲೂ ದೇಶದ ಕೋಟ್ಯಾಧಿಪತಿಗಳಲ್ಲಿ ಒಬ್ಬರಷ್ಟೇ ಶ್ರೀಮಂತರಾಗಿದ್ದಾರೆ. ಹೌದು, ಅದು ಬೇರೆ ಯಾರೂ ಅಲ್ಲ ಪ್ರಸಿದ್ಧ ಡಿ-ಮಾರ್ಟ್‌ ಮಳಿಗೆಗಳ ಮಾಲೀಕ ರಾಧಾಕೃಷ್ಣನ್‌ ದಮಾನಿ.

ದಮಾನಿ ಒಡೆತದ ಅವೆನ್ಯೂ ಸೂಪರ್‌ ಮಾರ್ಟ್‌ ಲಿಮಿಟೆಡ್‌ನ ಆದಾಯ ಈ ವರ್ಷ ಶೇಕಡಾ 5ರಷ್ಟು ಅಂದ್ರೆ 10.2 ಬಿಲಿಯನ್‌ ಡಾಲರ್‌ಗೆ ಏರಿಕೆ ಆಗಿದೆ. ಅವೆನ್ಯೂ ಸೂಪರ್‌ ಮಾರ್ಟ್‌ನ ಷೇರುಗಳ ಮೌಲ್ಯ ಈ ವರ್ಷ ಶೇಕಡಾ 18ರಷ್ಟು ಏರಿದೆ ಎಂದು ವರದಿಯಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮುಖೇಶ್‌ ಅಂಬಾನಿ ಮತ್ತು ಉದಯ್‌ ಕೊಟಕ್‌ ಶ್ರೀಮಂತಿಕೆ ಶೇಕಡಾ 32ರಷ್ಟು ಬಿದ್ದಿದೆ. ಇನ್ನೂ ಬಿಗ್‌ಬಜಾರ್‌ ಮಾಲೀಕತ್ವ ಹೊಂದಿರುವ ಫ್ಯೂಚರ್‌ ಗ್ರೂಪ್‌ನ ಷೇರುಗಳ ಮೌಲ್ಯ ಶೇಕಡಾ 80ರಷ್ಟು ಕುಸಿದಿದೆ.

ಲಾಕ್‌ಡೌನ್‌ ಹೊತ್ತಲ್ಲಿ ಡಿಮಾರ್ಟ್‌ಗಳಲ್ಲಿ ಜನ ಮುಗಿಬಿದ್ದು ಖರೀದಿಸಿದ್ದರು. ಲಾಕ್‌ಡೌನ್‌ ಮುಗಿದ ಬಳಿಕವೂ ಜನ ಆತಂಕದಿಂದ ಇದೇ ಸ್ವರೂಪದಲ್ಲಿ ದಿನಸಿ, ದವಸ ಧಾನ್ಯಗಳು ಒಳಗೊಂಡಂತೆ ಸಾಮಗ್ರಿಗಳನ್ನು ಹೆಚ್ಚು ಹೆಚ್ಚಾಗಿ ಖರೀದಿಸಬಹುದು ಎಂದು ಅಂದಾಜಿಸಲಾಗಿದೆ. ಇಂತಹ ಖರೀದಿಯೇ ಡಿಮಾರ್ಟ್‌ಗಳ ಮಾಲೀಕ ದಮಾನಿ ಸಂಪತ್ತು ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.

ಅಂದಹಾಗೆ ಕೊರೋನಾ ತಡೆಗಾಗಿ ಪ್ರಧಾನಮಂತ್ರಿ ಕ್ಷೇಮಾಭಿವೃದ್ಧಿ ನಿಧಿಗಾಗಿ 100 ಕೋಟಿ ರೂಪಾಯಿ, ಮಹಾರಾಷ್ಟ್ರ ಮತ್ತು ಗುಜರಾತ್‌ ಮುಖ್ಯಮಂತ್ರಿಗಳ ನಿಧಿಗೆ ತಲಾ 10 ಕೋಟಿ ರೂಪಾಯಿ, ಕರ್ನಾಟಕ, ಆಂಧ್ರ, ತೆಲಂಗಾಣ, ರಾಜಸ್ಥಾನ, ಪಂಜಾಬ್‌ ರಾಜ್ಯಗಳ ಮುಖ್ಯಮಂತ್ರಿ ನಿಧಿಗೆ ತಲಾ 5 ಕೋಟಿ ರೂಪಾಯಿ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ಮುಖ್ಯಮಂತ್ರಿ ನಿಧಿಗಾಗಿ 2.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

LEAVE A REPLY

Please enter your comment!
Please enter your name here