ಲಾಕ್‌ಡೌನ್‌ ಸುಲಭ, ಆದರೆ ದೇಶದ ಆರ್ಥಿಕತೆಗೆ ಒಳ್ಳೆದಲ್ಲ – ರಾಹುಲ್‌ ಗಾಂಧಿ ಜೊತೆಗಿನ ಸಂವಾದದಲ್ಲಿ ರಘುರಾಮ್‌ ರಾಜನ್‌ ಅಭಿಪ್ರಾಯ

ಕೊರೋನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್‌, ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲಿನ ಪರಿಣಾಮ, ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರ್‌ಬಿಐನ ಮಾಜಿ ಮುಖ್ಯಸ್ಥರೂ ಆಗಿರುವ ಡಾ ರಘುರಾಮ್‌ ರಾಜನ್‌ ಜೊತೆಗೆ ವೀಡಿಯೋ ಸಂವಾದ ನಡೆಸಿದರು.

ಆ ವೀಡಿಯೋ ಸಂವಾದದ ಪ್ರಮುಖ ಅಂಶಗಳು ಹೀಗಿವೆ:

೧) ಲಾಕ್‌ಡೌನ್‌ ಹೊತ್ತಲ್ಲಿ ಭಾರತದಲ್ಲಿ ಬಡವರಿಗೆ ಸಹಾಯ ಮಾಡಲು 65,000 ಕೋಟಿ ರೂಪಾಯಿ ಅಗತ್ಯವಿದೆ. ಆದರೆ ಇದು ದೊಡ್ಡ ಮೊತ್ತವೇನಲ್ಲ. ನಮ್ಮ ಅರ್ಥವ್ಯವಸ್ಥೆಯ ಗಾತ್ರ 2 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕವಾಗಿದೆ.

೨) ಲಾಕ್‌ಡೌನ್‌ ಸುಲಭ. ಆದರೆ ಅದರಿಂದ ದೇಶದ ಆರ್ಥಿಕತೆಗೆ ಒಳ್ಳೆದಲ್ಲ.

೩) ಭಾರತದಲ್ಲಿ ದಿನಕ್ಕೆ 20 ಲಕ್ಷ ಮಂದಿಗೆ ಆರೋಗ್ಯ ತಪಾಸಣೆ (ಕೊರೋನಾ ಪತ್ತೆಗಾಗಿ ) ನಡೆಸಬೇಕಿದೆ. ನಾವು ಆ ಸಂಖ್ಯೆಯ ಹತ್ತಿರದಲ್ಲೂ ಇಲ್ಲ. ನಾವು ಸಾಮೂಹಿಕ ಪರೀಕ್ಷೆ ನಡೆಸಬೇಕಿದೆ. ಇಂತಹ ಪರೀಕ್ಷೆಗಳಿಂದ ಆರೋಗ್ಯ ತಪಾಸಣಾ ಮೂಲಸೌಕರ್ಯದ ಮೇಲಿನ ಹೊರೆ ಕಮ್ಮಿ ಆಗಲಿದೆ.

೪) ಜನರನ್ನು ಆರೋಗ್ಯವಾಗಿ ಮತ್ತು ಜೀವಂತವಾಗಿರಿಸಬೇಕು. ಆಹಾರ ಅತ್ಯಂತ ಮುಖ್ಯವಾದದ್ದು. ಎಲ್ಲಿ ಪಡಿತರ ವ್ಯವಸ್ಥೆ ಇಲ್ಲವೋ ಅಲ್ಲಿಗೆ ತಲುಪಬೇಕು, ನಾವು ತಾತ್ಕಾಲಿಕ ಪಡಿತರ ವ್ಯವಸ್ಥೆಯನ್ನೂ ಮಾಡಬಹುದು.

೫) ಇಂತಹ ಘಟನೆಗಳು ಯಾವುದೇ ರಾಷ್ಟ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ಅಪರೂಪ. ಆದರೂ ನಾವು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಜಾಗತಿಕ ಆರ್ಥಿಕ ವ್ಯವಸ್ಥೆ ಬಗ್ಗೆ ಮರು ಯೋಚಿಸಬೇಕಿದೆ. ಭಾರತಕ್ಕೇನಾದರೂ ಅವಕಾಶ ಇದ್ದರೆ ಅದು ಮಾತುಕತೆಯ ಮುಂದಾಳತ್ವ ವಹಿಸುವುದು. ಅದಕ್ಕಿಂತಲೂ ಹೆಚ್ಚಾಗಿ ಬಹುಧ್ರುವೀಯ ಸಂವಾದದ ಸ್ವರೂಪವನ್ನು ಭಾರತದ ಬದಲಾಯಿಸಬಹುದಾಗಿದೆ.

೬) ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ನನ್ನ ಕಾನೂನೇ ಜಾರಿ ಆಗ್ಬೇಕು ಎನ್ನುವ ಮನಸ್ಥಿತಿ ಇರುತ್ತದೆ. ವ್ಯಕ್ತಿಗಳ ಸುತ್ತಿಕೊಂಡ ಈ ವ್ಯವಸ್ಥೆ ಬೇಗ ಪತನಗೊಳ್ಳಬಹುದು.

LEAVE A REPLY

Please enter your comment!
Please enter your name here