ಲಾಕ್‌ಡೌನ್‌ ಸಂಕಷ್ಟ – ರೈತರಿಂದ ತರಕಾರಿ ಖರೀದಿಸಿ ನೆರವಾದ ಕಾಂಗ್ರೆಸ್‌ ಶಾಸಕರು

ಕೊರೋನಾದಿಂದ ಹೇರಿಕೆ ಆಗಿರುವ ಲಾಕ್‌ಡೌನ್‌ಗೆ ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ಸರಬರಾಜು ಆಗದೇ ಹೊಲ ಗದ್ದೆಗಳಲ್ಲಿಯೇ ಕೊಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್‌ ಇಬ್ಬರು ಶಾಸಕರು ವಿಶೇಷ ರೀತಿಯಲ್ಲಿ ರೈತರ ನೆರವಿಗೆ ಧಾವಿಸಿದ್ದಾರೆ. ನೇರವಾಗಿ ರೈತರ ಬಳಿಗೆ ತೆರಳಿ ಅವರು ಬೆಳೆದ ಬೆಳೆಗಳನ್ನು ಖರೀದಿಸಿ ಬಳಿಕ ಅದನ್ನು ಕೊರೋನಾದಿಂದ ಸಂಕಷ್ಟದಲ್ಲಿರುವ ಬಡವರಿಗೆ ಹಂಚುತ್ತಿದ್ದಾರೆ.

ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ದೇವನಹಳ್ಳಿ ತಾಲೂಕಲ್ಲಿರುವ ರೈತರ ಜಮೀನಿಗೆ ತೆರಳಿ ತರಕಾರಿಗಳನ್ನು ಖರೀದಿಸಿದ್ದಾರೆ.

ತೊಂಡೆಕಾಯಿ – 2.5 ಟನ್‌, ಟೊಮ್ಯಾಟೋ – 2.5 ಟನ್‌, ಈರುಳ್ಳಿ – 2.2 ಟನ್‌, ಬೀಟ್‌ರೂಟ್‌ – 1.2 ಟನ್‌, ಕ್ಯಾರೆಟ್‌ – 1.2 ಟನ್‌, ಬದನೆಕಾಯಿ  – 250 ಕೆಜಿ ಮತ್ತು ಸೋರೆಕಾಯಿ –  250ಕೆಜಿಯಷ್ಟು ಖರೀದಿಸಿದ್ದಾರೆ. ಅದನ್ನು ತಮ್ಮ ಕ್ಷೇತ್ರ ಗಾಂಧಿನಗರದಲ್ಲಿರುವ ಬಡವರಿಗೆ ಉಚಿತವಾಗಿ ಹಂಚುವುದಾಗಿ ಹೇಳಿದ್ದಾರೆ.

ಇನ್ನೊಬ್ಬರು ಬೆಂಗಳೂರಿನ ಸಹಕಾರನಗರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ. ಲಾಕ್‌ಡೌನ್‌ ಘೋಷಣೆ ಆದ ಬಳಿಕ ನಿರಂತರವಾಗಿ ರೈತರಿಂದ ತರಕಾರಿ ಖರೀದಿಸಿ ನಂತರ ವಾರವಾಗುವಷ್ಟರ ಮಟ್ಟಿಗೆ ಬಡ ಕುಟುಂಬಗಳಿಗೆ ಹಂಚುತ್ತಿದ್ದಾರೆ. ಮೂರು ದಿನಗಳಲ್ಲಿ ಬರೋಬ್ಬರೀ 100 ಟನ್‌ನ್ನಷ್ಟು ತರಕಾರಿಯನ್ನು ಖರೀದಿಸಿ ಹಂಚಿದ್ದಾರೆ.

 

LEAVE A REPLY

Please enter your comment!
Please enter your name here