ಲಾಕ್‌ಡೌನ್‌ ವಿಸ್ತರಣೆಯಿಂದ ಕೊರೋನಾ ನಿಯಂತ್ರಣ ಆಗಲ್ಲ, ಹೊಸ ವೈದ್ಯಕೀಯ ಬಿಕ್ಕಟ್ಟು ಸೃಷ್ಟಿ – ಉದ್ಯಮಿ ಆನಂದ್‌ ಮಹೀಂದ್ರಾ ಅಭಿಪ್ರಾಯ

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಸಹಾಯ ಮಾಡದು ಎಂದಿರುವ ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಲಾಕ್‌ಡೌನ್‌ ಆರ್ಥಿಕವಾಗಿ ವಿನಾಶಕಾರಿ ಮಾತ್ರವಲ್ಲ ಜೊತೆ ಜೊತೆಗೆ ವೈದ್ಯಕೀಯವಾಗಿಯೂ ಹೊಸದೊಂದು ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದ್ದಾರೆ.

ಈ ಮೂಲಕ ಲಾಕ್‌ಡೌನ್‌ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಉದ್ಯಮಿಗಳ ಸಂಖ್ಯೆ ಬೆಳೆಯುತ್ತಿದೆ. ಈ ಹಿಂದೆ ಬಜಾಜ್‌ನ ರಾಜೀವ್‌‌ ಬಜಾಜ್‌ ಮತ್ತು ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣಮೂರ್ತಿ ಕೂಡಾ ಲಾಕ್‌ಡೌನ್‌ ಮುಂದುವರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಲಾಕ್‌ಡೌನ್‌ನಿಂದಾಗಿ ಜನಸಮೂಹದ ಮೇಲಾಗಬಹುದಾದ ಅಪಾಯಗಳ ಬಗ್ಗೆ 600 ವೈದ್ಯರು ನೀಡಿರುವ ವರದಿಯನ್ನು ಪೋಬ್ಸ್‌ ನಿಯತಕಾಲಿಕೆ ಪ್ರಕಟಿಸಿತ್ತು. ಆ ವರದಿಯನ್ನು ಉಲ್ಲೇಖಿಸಿ ಆನಂದ್‌ ಮಹೀಂದ್ರಾ ಟ್ವೀಟಿಸಿದ್ದಾರೆ.

ನಾನು ಈ ಮೊದಲೇ ಹೇಳಿದಂತೆ ಲಾಕ್‌ಡೌನ್‌ ಆರ್ಥಿಕವಾಗಿ ವಿನಾಶಕಾರಿ ಮಾತ್ರವಲ್ಲ, ಮತ್ತೊಂದು ವೈದ್ಯಕೀಯ ಬಿಕ್ಕಟ್ಟನ್ನು ಸೃಷ್ಟಿಸಬಹುದು. ಈ ಲೇಖನ ಲಾಕ್‌ಡೌನ್‌ನಿಂದಾಗಿ ಅಪಾಯಕಾರಿ ಮಾನಸಿಕ ಪರಿಣಾಮಗಳು ಮತ್ತು ಕೊರೋನಾ ಅಲ್ಲದ ರೋಗಿಗಳನ್ನು ಕಡೆಗಣಿಸುತ್ತಿರುವ ದೊಡ್ಡ ಅಪಾಯವನ್ನು ಹೇಳಿದೆ.

ನೀತಿ ನಿರೂಪಕರಿಗೆ ಆಯ್ಕೆ ಮಾಡುವುದು ಸುಲಭ ಅಲ್ಲ, ಆದರೆ ಲಾಕ್‌ಡೌನ್‌ ವಿಸ್ತರಣೆ ಸಹಾಯಕವಲ್ಲ. ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುತ್ತದೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್‌ನ ಜೊತೆಗೆ ಆಕ್ಸಿಜನ್‌ ಪೊರೈಕೆಯನ್ನು ಶೀಘ್ರಗತಿಯಲ್ಲಿ ವಿಸ್ತರಣೆ ಮಾಡುವುದು ಮುಖ್ಯ. ಸೇನೆಗೆ ಈ ವಿಷಯದಲ್ಲಿ ಅಪಾರ ಅನುಭವ ಇದೆ

ಎಂದು ಆನಂದ್‌ ಮಹೀಂದ್ರಾ ಟ್ವೀಟಿಸಿದ್ದಾರೆ.

ಇದನ್ನೂ ಓದಿ:

ಈ ಅನಗತ್ಯ ಲಾಕ್‌ ಡೌನ್‌ ಬಗ್ಗೆ ನಾವು ಯೋಚಿಸಬೇಕಾಗಿದೆ- ಬಜಾಜ್‌ ಆಟೋ ಎಂಡಿ ರಾಜೀವ್‌ ಬಜಾಜ್‌

ಕೊರೋನಾ ವೈರಸ್‌ಗಿಂತ ಲಾಕ್‌ಡೌನೇ ಹೆಚ್ಚು ಜನರನ್ನು ಸಾಯಿಸಬಹುದು – ಇನ್ಫಿ ನಾರಾಯಣಮೂರ್ತಿ ಎಚ್ಚರಿಕೆ

LEAVE A REPLY

Please enter your comment!
Please enter your name here