ಕೊರೋನಾ ವೈರಸ್‌ಗಿಂತ ಲಾಕ್‌ಡೌನೇ ಹೆಚ್ಚು ಜನರನ್ನು ಸಾಯಿಸಬಹುದು – ಇನ್ಫಿ ನಾರಾಯಣಮೂರ್ತಿ ಎಚ್ಚರಿಕೆ

ಕೊರೋನಾ ವೈರಸ್‌ಗಿಂತಲೂ ದೀರ್ಘಕಾಲದ ಲಾಕ್‌ಡೌನ್‌ ಭಾರತದಲ್ಲಿ ಹೆಚ್ಚು ಜನರನ್ನು ಕೊಲ್ಲಬಹುದು ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌ ಆರ್‌ ನಾರಾಯಣಮೂರ್ತಿ ಎಚ್ಚರಿಸಿದ್ದಾರೆ.

ಒಂದು ವೇಳೆ ಲಾಕ್‌ಡೌನ್‌ ಮುಂದುವರಿದರೆ ಆಗ ಕೊರೋನಾ ಸಾಂಕ್ರಾಮಿಕ ರೋಗಕ್ಕಿಂತಲೂ ಹಸಿವಿನಿಂದಲೇ ಸಾಯುವವರ ಸಂಖ್ಯೆ ಹೆಚ್ಚಾಗಬಹುದು. ಕೆಲಸ ಮಾಡಲು ಯಾರು ಸಮರ್ಥರಿದ್ದಾರೋ ಅವರು ಕೆಲಸಕ್ಕೆ ಮರಳಲು ಬಿಡಬೇಕು ಮತ್ತು ಕೊರೋನಾ ವೈರಸ್‌ಗೆ ಸುಲಭದಲ್ಲಿ ಗುರಿ ಅಗುವವರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಬೇಕು ಎಂದು ವೆಬ್‌ನಾರ್‌ ಮೂಲಕ ಉದ್ಯಮಿಗಳ ಜೊತೆಗಿನ ಸಂವಾದಲ್ಲಿ ನಾರಾಯಣಮೂರ್ತಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಭಾರತದಲ್ಲಿ ದೀರ್ಘಕಾಲದ ಲಾಕ್‌ಡೌನ್‌ ಮುಂದುವರಿಯಲು ಸಾಧ್ಯವಿಲ್ಲ. ಸಹಜವಾಗಿ ಸಾವನ್ನಪ್ಪುವ 90 ಲಕ್ಷ ಜನರ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೆ ಮತ್ತು ಅದನ್ನು ನೀವು ಕಳೆದ ೨ ತಿಂಗಳಲ್ಲಿ ಕೊರೋನಾ ವೈರಸ್‌ಗೆ ಸತ್ತ 1 ಸಾವಿರ ಜನರ ಸಂಖ್ಯೆಗೆ ಹೋಲಿಸಿದರೆ ಆಗ ಕೊರೋನಾ ವೈರಸ್‌ ಬಗ್ಗೆ ನಾವು ಯೋಚಿದಷ್ಟು ಆತಂಕ ಪಡುವ ಅಗತ್ಯವಿಲ್ಲ ಎಂದೂ ನಾರಾಯಣ ಮೂರ್ತಿ ಹೇಳಿದ್ದಾರೆ.‌

ಇದನ್ನೂ ಓದಿ:

ಈ ಅನಗತ್ಯ ಲಾಕ್‌ ಡೌನ್‌ ಬಗ್ಗೆ ನಾವು ಯೋಚಿಸಬೇಕಾಗಿದೆ- ಬಜಾಜ್‌ ಆಟೋ ಎಂಡಿ ರಾಜೀವ್‌ ಬಜಾಜ್‌

ದೇಶದಲ್ಲಿ 19 ಕೋಟಿ ಜನರು ಅಂಸಘಟಿತ ವಲಯ ಮತ್ತು ಸ್ವಯಂ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಲಾಕ್‌ಡೌನ್‌ನಿಂದ ಜೀವನೋಪಾಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಲಾಕ್‌ಡೌನ್‌ ಇನ್ನಷ್ಟು ಮುಂದುವರಿದರೆ ಆಗ ಮತ್ತಷ್ಟು ಮಂದಿ ಜೀವನೋಪಾಯ ಕಳೆದುಕೊಳ್ಳಬಹುದು ಎಂದೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಇಂಗ್ಲೀಷ್‌ ಬ್ಯುಸಿನೆನ್‌ ವಾಹಿನಿ ಆಯೋಜಿಸಿದ್ದ ಉದ್ಯಮಿಗಳ ವೆಬ್‌ನಾರ್‌ ಸಂವಾದದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here