ಲಾಕ್‌ಡೌನ್‌ ಉಲ್ಲಂಘಿಸಿ ಕೆಆರ್‌ಎಸ್‌ ಬಳಿ ರಾತ್ರಿ ರೇವ್‌ ಪಾರ್ಟಿ – ಪೊಲೀಸ್‌ ಠಾಣೆ ಬಳಿಯೇ ಪಾರ್ಟಿ – ವೀಡಿಯೋ ಇಲ್ಲಿದೆ

ಲಾಕ್‌ಡೌನ್‌ ಹೊತ್ತಲ್ಲೇ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಸಮೀಪದ ತೋಟದ ಮನೆಯಲ್ಲಿ ರೇವ್‌ ಪಾರ್ಟಿ ನಡೆದಿದೆ. ಮೈಸೂರು ಮೂಲದ ಸಂಜಯ್‌ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಪಾರ್ಟಿ ನಡೆದಿದೆ.

ಈ ಪಾರ್ಟಿಯಯಲ್ಲಿ ಶ್ರೀಮಂತರು, ದೊಡ್ಡ ದೊಡ್ಡ ವ್ಯಕ್ತಿಗಳು ಕಾರುಗಳಲ್ಲಿ ರಾತ್ರಿ ತೋಟದ ಮನೆಯಲ್ಲಿ ನಡೆದಿರುವ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.

ಪೊಲೀಸ್‌ ಠಾಣೆ ಸಮೀಪದಲ್ಲಿರುವ ತೋಟದ ಮನೆಯಲ್ಲಿ ರೇವ್‌ ಪಾರ್ಟಿ ನಡೆದಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಾರ್ಟಿ ಬಗ್ಗೆ ಪ್ರಶ್ನಿಸಿದ ಸ್ಥಳೀಯರಿಗೂ ಪಾರ್ಟಿಗೆ ಬಂದಿದ್ದವರು ಮತ್ತು ಆಯೋಜಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 34 ಜನರ ವಿರುದ್ಧ ಐಪಿಸಿ ಸೆಕ್ಷನ್ 268, 271, 290, 92(ಐ) ಅಡಿ ಪ್ರಕರಣ ದಾಖಲಾಗಿದೆ. ಬಳಿಕ 34 ಮಂದಿಯನ್ನೂ ಸ್ಟೇಷನ್‌ ಬೇಲ್‌ನಡಿ ಬಿಡುಗಡೆ ಮಾಡಲಾಗಿದೆ.

LEAVE A REPLY

Please enter your comment!
Please enter your name here