ಲಾಕ್‌ಡೌನ್‌ನಿಂದ ಹಸಿದ ಹೊಟ್ಟೆಗಳಿಗೆ ಅನ್ನಕ್ಕೂ ಹಾಹಾಕಾರ – ಇತ್ತ ಸರ್ಕಾರಿ ದಾಸ್ತಾನಲ್ಲಿರುವ ಅಕ್ಕಿಯಿಂದ ಸ್ಯಾನಿಟೈಸರ್‌ ಉತ್ಪಾದನೆ

ಕೊರೋನಾ ತಡೆಗಾಗಿ ಲಾಕ್‌ಡೌನ್‌ ಹೇರಿಕೆ ಆಗಿ ಕೋಟ್ಯಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿವಾದ ಸೃಷ್ಟಿಬಹುದಾದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರಿ ಗೋದಾಮುಗಳಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಅಕ್ಕಿಯನ್ನು ಸ್ಯಾನಿಟೈಸರ್‌ ಉತ್ಪಾದನೆಗೆ ಬಳಸಿಕೊಳ್ಳಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಸ್ಯಾನಿಟೈಸರ್‌ ಉತ್ಪಾದನೆ ಮತ್ತು ಪೆಟ್ರೋಲ್‌ನಲ್ಲಿ ಸಮೀಕರಣಕ್ಕೆ ಅಗತ್ಯವಾದ ಎಥೆನಾಲ್‌ನ ಉತ್ಪಾದನೆಗಾಗಿ ಅಕ್ಕಿಯನ್ನು ಬಳಸಲು ತೀರ್ಮಾನಿಸಿದೆ.

ಜೈವಿಕ ತೈಲಗಳ ಮೇಲಿನ ರಾಷ್ಟ್ರೀಯ ನೀತಿಯಡಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತೀಯ ಆಹಾರ ನಿಗಮದಲ್ಲಿರುವ ಹೆಚ್ಚುವರಿ ಅಕ್ಕಿಯನ್ನು ಆಲ್ಕೋಹಾಲ್‌ ಆಧಾರಿತ ಸ್ಯಾನಿಟೈಸರ್‌ ಉತ್ಪಾದನೆಗಾಗಿ ಎಥೆನಾಲ್‌ ಉತ್ಪಾದನೆ ಮತ್ತು ಪೆಟ್ರೋಲ್‌ನಲ್ಲಿ ಎಥೆನಾಲ್‌ ಸಮೀಕರಣಕ್ಕಾಗಿ ಬಳಸಲು ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಜೈವಿಕ ಇಂಧನ ನೀತಿ ಪ್ರಕಾರ ಒಂದು ವೇಳೆ ಕೃಷಿ ಸಚಿವಾಲಯ ನಿರ್ದಿಷ್ಟ ಬೆಳೆ ವರ್ಷದಲ್ಲಿ ಒಂದು ವೇಳೆ ಆಹಾರ ಧಾನ್ಯಗಳ ಪೊರೈಕೆಯಿಂದ ಹೆಚ್ಚಿದೆ ಎಂದು ಅಂದಾಜಿಸಿದರೆ ಆಗ ಹೆಚ್ಚುವರಿ ಆಹಾರ ಧಾನ್ಯವನ್ನು ಎಥೆನಾಲ್‌ ಉತ್ಪಾದನೆಗಾಗಿ ಬಳಸಿಕೊಳ್ಳಬಹುದು.

LEAVE A REPLY

Please enter your comment!
Please enter your name here