ಲಾಕ್‌ಡೌನ್‌ನಿಂದ ವಿನಾಯ್ತಿ ಘೋಷಿಸಿದ ಸಿಎಂ ಯಡಿಯೂರಪ್ಪ

ಲಾಕ್‌ಡೌನ್‌ನಿಂದ ಮಹತ್ವದ ವಿನಾಯ್ತಿಗಳನ್ನು ಘೋಷಿಸಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಇವತ್ತು ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಏಪ್ರಿಲ್‌ 20ರ ಬಳಿಕ ವಿನಾಯ್ತಿ ಘೋಷಿಸಿದ್ದಾರೆ. ಆದ್ರೆ ಬೈಕ್‌ ಸವಾರರಿಗೆ ನೀಡಲಾಗಿದ್ದ ವಿನಾಯ್ತಿಯನ್ನು ಕೆಲವೇ ಗಂಟೆಗಳಲ್ಲಿ ವಾಪಸ್‌ ಪಡೆದು ಅಚ್ಚರಿ ಮೂಡಿಸಿದ್ದಾರೆ.

1) ಕರ್ನಾಟಕದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬೈಕ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಆದ್ರೆ ಆ ವಿನಾಯ್ತಿಯನ್ನು ಕೆಲವೇ ಗಂಟೆಗಳಲ್ಲಿ ವಾಪಸ್‌ ಪಡೆಯಲಾಗಿದೆ.

2) ಬೆಂಗಳೂರು ಒಳಗೊಂಡು ಕರ್ನಾಟಕದ ಇತರೆ ನಗರಗಳಲ್ಲಿ ಐಟಿ ಬಿಟಿ ಕಂಪನಿಗಳು ಕಾರ್ಯನಿರ್ವಹಿಸುವುದಕ್ಕೆ ಅನುಮತಿ ನೀಡಲಾಗಿದೆ. ಆದರೆ ಐಟಿ ಕಂಪನಿಗಳಲ್ಲಿ ಶೇಕಡಾ 33ರಷ್ಟು ಮಂದಿಗೆ ಮಾತ್ರ ಕಚೇರಿಗೆ ಹೋಗಲು ಅವಕಾಶವಿದೆ. ಆದರೆ ಕಂಪನಿಗಳೇ ಉದ್ಯೋಗಿಗಳಿಗೆ ಬಸ್‌ ವ್ಯವಸ್ಥೆ ಮಾಡಬಹುದು.

3) ಇಲ್ಲಿಯವರೆಗೆ ನೀಡಲಾಗಿರುವ ಲಾಕ್‌ಡೌನ್‌ ಪಾಸ್‌ ಮೇ 3ರವರೆಗೂ ಅನ್ವಯ ಆಗುತ್ತೆ.

4) ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರಸ್ತೆ, ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಸಿಮೆಂಟ್‌, ಜಲ್ಲಿ, ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿದೆ.

5) ಜಿಲ್ಲೆಗಳ ಜಿಲ್ಲೆಗಳ ನಡುವೆ ಓಡಾಟ ಇಲ್ಲ. ಆದರೆ ಜಿಲ್ಲೆಯೊಳಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಂಟೈನ್‌ಮೆಂಟ್‌ ಝೋನ್‌ ಹೊರತುಪಡಿಸಿ.

6 ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯನ್ನು ಓಡಾಟದ ಸಲುವಾಗಿ ಒಂದೇ ಜಿಲ್ಲೆಯೆಂದು ಪರಿಗಣಿಸಲಾಗಿದೆ.

7) ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ವಿಶೇಷ ಆರ್ಥಿಕ ವಲಯಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

8) ಅವಶ್ಯಕ ವಸ್ತುಗಳ ಸಾಗಾಟ ಅನುಮತಿ ನೀಡಲಾಗಿದೆ.

9) ನಗರದ ಪ್ರದೇಶಗಳಲ್ಲಿ ಕಾರ್ಮಿಕರು ಉಳಿದುಕೊಳ್ಳಲು ವ್ಯವಸ್ಥೆ ಇದ್ದರೆ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.

10) ಕೊರೋನಾ ಹಾಟ್‌ಸ್ಪಾಟ್‌ ಮತ್ತು ಕಂಟೈನ್‌ಮೆಂಟ್‌ ಝೋನ್‌ಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಟೌನ್‌ಶಿಪ್‌ ಒಳಗೊಂಡಂತೆ ಕೈಗಾರಿಕೆಗಳನ್ನು ತೆರೆಯಬಹುದಾಗಿದೆ.

11) ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ, ಕ್ಯಾಬ್‌, ಟ್ಯಾಕ್ಸಿ, ನಮ್ಮ ಮೆಟ್ರೋ, ಖಾಸಗಿ ಬಸ್‌ಗಳ ಓಡಾಟಕ್ಕೆ ಅವಕಾಶ ಇಲ್ಲ. ರೈಲುಗಳ ಓಡಾಟವೂ ಇರಲ್ಲ.

1 COMMENT

LEAVE A REPLY

Please enter your comment!
Please enter your name here