ಲಾಕ್‌ಡೌನ್‌ನಿಂದ ನಷ್ಟ 30 ಲಕ್ಷ ಕೋಟಿ ರೂಪಾಯಿ – ವಿಶೇಷ ಪ್ಯಾಕೇಜ್‌ 20 ಲಕ್ಷ ಕೋಟಿ ರೂ..!

ಲಾಕ್‌ಡೌನ್‌ನಿಂದ ಇಲ್ಲಿಯವರೆಗೆ ದೇಶಕ್ಕೆ ಆಗಿರುವ ಆರ್ಥಿಕ ನಷ್ಟ ಬರೋಬ್ಬರೀ 30 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ಗಿಂತ 10 ಲಕ್ಷ ಕೋಟಿ ರೂಪಾಯಿ ಹೆಚ್ಚು.

ಅಂದಹಾಗೆ ಲಾಕ್‌ಡೌನ್‌ನಿಂದಾಗಿ ಅತೀ ಹೆಚ್ಚು ನಷ್ಟ ಅನುಭವಿಸಿರುವುದು ಪ್ರಮುಖವಾಗಿ ಐದು ರಾಜ್ಯಗಳಲ್ಲಿ. ಅದರಲ್ಲಿ ಕರ್ನಾಟಕವೂ ಒಳಗೊಂಡಿದೆ.

30 ಲಕ್ಷ ಕೋಟಿ ರೂಪಾಯಿ ನಷ್ಟದಲ್ಲಿ ಮಹಾರಾಷ್ಟ್ರಕ್ಕೆ ಶೇಕಡಾ 15.6ರಷ್ಟು, ತಮಿಳುನಾಡಿಗೆ ಶೇಕಡಾ 9.4ರಷ್ಟು, ಗುಜರಾತ್‌ಗೆ ಶೇಕಡಾ 8.6ರಷ್ಟು, ಉತ್ತರ ಪ್ರದೇಶಕ್ಕೆ ಶೇಕಡಾ 8.3ರಷ್ಟು ಮತ್ತು ಕರ್ನಾಟಕಕ್ಕೆ ಶೇಕಡಾ 6.7ರಷ್ಟು ಪಾಲಿದೆ. ಈ ಐದು ರಾಜ್ಯಗಳಿಗೆ ಆಗಿರುವ ಒಟ್ಟು ನಷ್ಟ 11 ಲಕ್ಷ ಕೋಟಿ ರೂಪಾಯಿ.

ಈ ಐದು ರಾಜ್ಯಗಳು ದೇಶದ ಒಟ್ಟು ಜಿಡಿಪಿಯ ಶೇಕಡಾ 50ರಷ್ಟನ್ನು ಹೊಂದಿವೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ಹೇಳಿದೆ.

LEAVE A REPLY

Please enter your comment!
Please enter your name here