ಲಾಕ್‌ಡೌನ್‌ನಿಂದ ಇಳಿದಿದ್ದು ಕೊರೋನಾ ರೇಖೆ ಅಲ್ಲ, ಜಿಡಿಪಿ ರೇಖೆ..! – ಉದ್ಯಮಿ ರಾಜೀವ್‌ ಬಜಾಜ್‌ ಆಕ್ರೋಶ

ಲಾಕ್‌ಡೌನ್‌ನಿಂದ ಕೊರೋನಾ ಕೇಸ್‌ನ ರೇಖೆ ಇಳಿಯುವ ಬದಲು ದೇಶದ ಆರ್ಥಿಕ ಅಭಿವೃದ್ಧಿ ಜಿಡಿಪಿಯ ರೇಖೆ ಇಳಿದೆ. ಸರ್ಕಾರ ತಪ್ಪಾಗಿರುವ ರೇಖೆಯನ್ನು ಇಳಿಸಿದೆ ಎಂದು ಖ್ಯಾತ ಉದ್ಯಮಿ ರಾಜೀವ್‌ ಬಜಾಜ್‌ ಹೇಳಿದ್ದಾರೆ.

ಭಾರತದಲ್ಲಿ ಹೇರಲಾದ ಲಾಕ್‌ಡೌನ್‌ನ್ನು ಅತ್ಯಂತ ಕ್ರೂರ ಲಾಕ್‌ಡೌನ್‌ ಎಂದಿರುವ ಅವರು ಜಗತ್ತಿನಲ್ಲಿ ಇಂಥ ಲಾಕ್‌ಡೌನ್‌ನ್ನು ಎಲ್ಲೂ ಹೇರಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕವಾಸಕಿ ಜೊತೆಗಿನ ನಮ್ಮ ನಂಟಿನ ಕಾರಣದಿಂದ ನಮಗೆ ಜಪಾನ್‌ನಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿದ್ದಾರೆ. ನನಗೆ ಸಿಂಗಾಪುರದಲ್ಲೂ ಪರಿಚಯಸ್ಥರಿದ್ದಾರೆ, ಯುರೋಪ್‌ನಲ್ಲಿ ಪರಿಚಯಸ್ಥರಿದ್ದಾರೆ. ಅಮೆರಿಕದ ನ್ಯೂಯಾರ್ಕ್‌, ಮಿಚಿಗನ್‌ ಮತ್ತು ವಾಷಿಂಗ್ಟನ್‌ ಡಿಸಿಯಲ್ಲಿ ನನಗೆ ಸ್ನೇಹಿತರಿದ್ದಾರೆ. ಜಗತ್ತಿನಲ್ಲೂ ಎಲ್ಲೂ ಕೂಡಾ ಇಂತಹ ಲಾಕ್‌ಡೌನ್‌ನ್ನು ಹೇರಿಲ್ಲ. ಇಂತಹ ಲಾಕ್‌ಡೌನ್‌ನ್ನು ನಾನು ಎಲ್ಲೂ ಕೇಳೂ ಇಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜೊತೆಗಿನ ಸಂದರ್ಶನದಲ್ಲಿ ರಾಜೀವ್‌ ಬಜಾಜ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here