ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ ಭೀಕರ – ಆರ್ಥಿಕತೆ ಸರಿಹೋಗಲು ವರ್ಷಗಳೇ ಬೇಕಾಗಬಹುದು – ಆರ್‌ಬಿಐ

ಲಾಕ್‌ಡೌನ್‌ನಿಂದ ಭಾರತದ ಆರ್ಥಿಕತೆ ಮೇಲಾಗಿರುವ ಹೊಡೆತ ಆರಂಭಿಕ ಅಂದಾಜಿಗಿಂತಲೂ ಭೀಕರವಾಗಿದೆ ಎಂದು ಆರ್‌ಬಿಐ ಹೇಳಿದೆ. ಲಾಕ್‌ಡೌನ್‌ನಿಂದ ಆಗಿರುವ ಆರ್ಥಿಕ ಹೊಡೆತವನ್ನು ಸರಿ ಮಾಡಲು ವರ್ಷಗಳೇ ಬೇಕಾಗಬಹುದು ಎಂದೂ ದೇಶದ ಅತ್ಯುನ್ನತ ಬ್ಯಾಂಕ್‌ ತನ್ನ ವಿತ್ತೀಯ ನೀತಿ ಸಮಿತಿಯ ವರದಿಯಲ್ಲಿ ಹೇಳಿದೆ.

ಲಾಕ್‌ಡೌನ್‌ ವೇಳೆ ಕೇವಲ ಕೃಷಿ ಕ್ಷೇತ್ರವನ್ನಷ್ಟೇ ಆಶಾಕಿರಣವಾಗಿದ್ದು, ಹಿಂಗಾರು ಬಿತ್ತನೆ ವೇಗ ಪಡೆದಿತ್ತು ಎಂದಿರುವ ಆರ್‌ಬಿಐ ದೇಶದ ಆರ್ಥಿಕ ಬೆಳವಣಿಗೆ ದರ ಋಣಾತ್ಮಕವಾಗಿರಲಿದೆ ಎಂದು ಅಂದಾಜಿಸಿದೆ.

LEAVE A REPLY

Please enter your comment!
Please enter your name here