ಲಾಕ್‌ಡೌನ್‌ನಿಂದಾಗಿ ವಕೀಲರು ಸಂಕಷ್ಟದಲ್ಲಿ – 25 ಕೋಟಿ ರೂ. ನೆರವು ಘೋಷಿಸಿ – ಸಿಎಂಗೆ ಡಿ ಕೆ ಶಿವಕುಮಾರ್‌ ಆಗ್ರಹ

ಪ್ರಾತಿನಿಧಿಕ ಚಿತ್ರ

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು ಘೋಷಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಿಎಂ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿ ಆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋರ್ಟ್‌ಗಳು ಬಂದ್‌ ಆಗಿವೆ. ಹೀಗಾಗಿ ವಕೀಲರ ಜೀವನ ನಿರ್ವಹಣೆಗೆ ತೊಂದರೆ ಆಗಿದೆ.

ರಾಜ್ಯದಲ್ಲಿ ಸುಮಾರು 1.05 ಲಕ್ಷ ವಕೀಲರಿದ್ದು, ಇವರು ವಕೀಲ ವೃತ್ತಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ.  ಹೀಗಾಗಿ ವಕೀಲ ವೃಂದದವರಿಗೆ ಸರ್ಕಾರ 25 ಕೋಟಿ ನೆರವು ನೀಡಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here