ಲಸಿಕೆ ಕೊಡದಿದ್ದರೆ ಸಿಎಂ ಮನೆ ಮುಂದೆ ಧರಣಿ..! ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಎಚ್ಚರಿಕೆ

ದಾವಣಗೆರೆ ಜಿಲ್ಲೆಗೆ ಲಸಿಕೆ ಸರಬರಾಜು ಮಾಡದೇ ಇದ್ದರೆ ಸಿಎಂ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಗೆ ಕೆಲವೇ ಕೆಲವು ಲಸಿಕೆ ಸರಬರಾಜು ಆಗುತ್ತಿದೆ. ಕಡಿಮೆ ಲಸಿಕೆಯಿಂದ ಹೊಡೆದಾಡೋ ಪರಿಸ್ಥಿತಿ ಬಂದಿದೆ. ಕನಿಷ್ಟ 40-50 ಸಾವಿರ ವ್ಯಾಕ್ಸಿನ್ ಬೇಕಿದೆ. ಲಸಿಕೆ ಸಿಗದಿದ್ದರೆ ಎಲ್ಲಾ ಜನಪ್ರತಿನಿಧಿಗಳು ಹೋಗಿ ಸಿಎಂ ಮನೆ ಮುಂದೆ ಧರಣಿ ಕೂರೋಣ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದ್ದಾರೆ.

ಜನರಿಗೆ ಯಾವೂದೇ ಕಾರಣಕ್ಕೂ ಲಸಿಕೆ ಇಲ್ಲ ಅಂತ ಹೇಳುವಂತಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ಕೊಡಲೇ ಬೇಕು ಎಂದು  ಜಿಎಂ ಸಿದ್ದೇಶ್ವರ್ ಸಿಎಂ ಗೆ ಎಚ್ಚರಿಕೆ‌ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here