ಲಸಿಕೆ ಕುರಿತು ತಪ್ಪು ಮಾಹಿತಿ ನೀಡಿದ ಆರೋಪ ಸಾಬೀತಾದ್ದರೆ ರಾಜೀನಾಮೆ ನೀಡುವೆ: ಖಾದರ್

ಲಸಿಕೆ ವಿಚಾರದಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸಿರುವ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಮಾಜಿ ಸಚಿವ ಮತ್ತು ಶಾಸಕ ಯು.ಟಿ.ಖಾದರ್ ಅವರು ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಲಸಿಕೆಯ ಬಗ್ಗೆ ರಾಜಕೀಯ ಮಾತನಾಡಿ ಕಾಂಗ್ರೆಸ್​ನವರು ದಾರಿ ತಪ್ಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಲಸಿಕೆ ಹಿಂದಿನ ವಿಜ್ಞಾನ ಮತ್ತು ತರ್ಕದ ಬಗ್ಗೆ ಮಾತನಾಡುವ ಬದಲು ರಾಜಕೀಯ ಮಾಡುತ್ತಿದೆ.

ಆದರೆ ಲಸಿಕೆ ಕುರಿತು ರಾಜಕೀಯ ಮಾಡುವ ಬದಲು, ಲಸಿಕೆಯ ಹಿಂದಿನ ತರ್ಕ ಮತ್ತು ವಿಜ್ಞಾನದ ಬಗ್ಗೆ ಮಾತನಾಡಿ. ಒಂದು ವೇ ಳೆ ಲಸಿಕೆಗಳ ಬಗ್ಗೆ ನಾನು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ್ದೇನೆ ಎಂಬುದು ಸಾಬೀತಾದರೆ ನಾನು ರಾಜಕೀಯವನ್ನು ತೊರೆಯುತ್ತೇನೆ” ಎಂದು ಖಾದರ್ ಹೇಳಿದ್ದಾರೆ.

ಜನರನ್ನು ದಾರಿ ತಪ್ಪಿಸಲು ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಇವರು ನಾಚಿಕೆಪಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಸಾಕಷ್ಟು ಲಸಿಕೆಗಳನ್ನು ನೀಡುವಲ್ಲಿ ವಿಫಲವಾಗಿವೆ. ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳು ದೊರಕಿದರೂ ಸಾಕಷ್ಟು ಲಸಿಕೆಗಳನ್ನು ಪಡೆಯಲು ಸರ್ಕಾರ ವಿಫಲವಾಗಿದೆ.

ದೇಶದಲ್ಲಿ ದಿನಕ್ಕೆ ಎಷ್ಟು ಲಸಿಕೆಗಳನ್ನು ಉತ್ಪಾದಿಸಲಾಗುತ್ತದೆ ಮತ್ತು ಅದನ್ನು ಯಾರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸರ್ಕಾರ ಉತ್ತರಿಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here