ಲಕ್ಷ ಚಪ್ಪಲಿ ಕತೆ.. ಭಾರತೀಯ ಸಂಸ್ಕೃತಿ ತೋರಿಸಿತು ಅಪ್ಪು ಸಾವಿನ ಪ್ರಸಂಗ!

ಇದು ಲಕ್ಷ ಲಕ್ಷ ಚಪ್ಪಲಿ ಕತೆ.. ಅಪ್ಪು ಸಾವಿನ ಪ್ರಸಂಗ ಭಾರತೀಯ ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣ ಮಾಡಿದೆ.

ಶತ್ರು ಸತ್ತರೂ, ಅವನ ಸಾವಿನ ನಂತರ ಒಂದೆರಡು ಒಳ್ಳೆಯ ಮಾತುಗಳನ್ನು ಆಡುವುದನ್ನು ನೋಡಿರುತ್ತೀರಿ.. ದೇಗುಲಗಳಿಗೆ ತೆರಳಿದ ಸಂದರ್ಭದಲ್ಲಿ.. ಕಛೇರಿ ಮತ್ತು ಇತರೆಡೆಗಳಲ್ಲಿ ಪ್ರಸಾದ ಹಂಚುವಾಗ ಚಪ್ಪಲಿ ಬಿಟ್ಟೇ ಅದನ್ನು ಸ್ವೀಕಾರ ಮಾಡುತ್ತೇವೆ. ಅದೇ ರೀತಿ ಅಂತಿಮ ದರ್ಶನ ಪಡೆಯುವ ಮಾಡುತ್ತೇವೆ.

ಅಪ್ಪು ಪಾರ್ಥಿವ ಶರೀರ ಇರಿಸಿದ್ದ ಕಂಠೀರವ ಸ್ಟೇಡಿಯಂಗೆ ಭರ್ತಿ ಎರಡು  ದಿನ ಅಂದಾಜು  25ಲಕ್ಷ ಅಭಿಮಾನಿಗಳು ಬಂದು  ಅಪ್ಪು ಕಡೆಯ  ದರ್ಶನ ಮಾಡಿ  ನಮಿಸಿದ್ದಾರೆ. ಇದರಲ್ಲಿ  ಉತ್ತರ  ಕರ್ನಾಟಕದಿಂದ  ಬಂದವರು ಲಕ್ಷ  ಲಕ್ಷ  ಜನ.

ಅಪ್ಪು ಪಾರ್ಥಿವ ಶರೀರ ದರ್ಶನವನ್ನು ನೋಡಲು ಸ್ಟೇಡಿಯಂಗೆ ಬಂದ ಉತ್ತರ  ಕರ್ನಾಟಕದ ಲಕ್ಷಾಂತರ ಮಂದಿ, ಎಂಟ್ರಿ ಕೊಡುವ  ಮುನ್ನ ತಾವು  ಧರಿಸಿದ್ದ ಚಪ್ಪಲಿಯನ್ನು ಕ್ರೀಡಾಂಗಣದ ಹೊರಗೆ ಬಿಟ್ಟು ತೆರಳಿದ್ದರು. ಆದರೆ  ಬೇರೊಂದು ಮಾರ್ಗದಲ್ಲಿ ನಿರ್ಗಮಿಸಲು ಪೊಲೀಸರು  ಅನುವು ಮಾಡಿಕೊಟ್ಟಿದ್ದ ಹಿನ್ನೆಲೆಯಲ್ಲಿ.. ಮತ್ತು ಅಸಂಖ್ಯ ಚಪ್ಪಲಿಗಳನ್ನು ಒಂದೇ ಕಡೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ಅಂತಿಮ  ದರ್ಶನದ ಬಳಿಕ ವಾಪಸ್ಸದವರಿಗೆ ತಮ್ಮ ತಮ್ಮ  ಚಪ್ಪಲಿಗಳೇ  ಸಿಕ್ಕಿರಲಿಲ್ಲ.

ಈ ಬಗ್ಗೆ ಶನಿವಾರ ಪಬ್ಲಿಕ್ ಟಿವಿ ಮುಖ್ಯಸ್ಥರಾದ  ಹೆಚ್ ಆರ್ ರಂಗನಾಥ್  ಅವರು  ಬಿಗ್ ಬುಲೆಟಿನ್ ಪ್ರಸ್ತಾಪ ಮಾಡಿದ್ದರು. ಸ್ಟೇಡಿಯಂ ಬಳಿ ರಾಶಿ  ರಾಶಿ  ಚಪ್ಪಲಿ  ಬಿದ್ದಿವೆಯಂತೆ. ಇದಲ್ಲವೇ ಭಾರತೀಯ ಸಂಸ್ಕೃತಿ ಎಂದು ಶ್ಲಾಘಿಸಿದ್ದರು.

ಇದೆ ಅಂಶವನ್ನು ಇನ್ಸ್ಟಾಗ್ರಾಮ್ ನಲ್ಲಿ ಪವರ್  ಸ್ಟಾರ್ ಪುನೀತ್ ಅಭಿಮಾನಿ ಬಳಗ ಹಂಚಿಕೊಂಡಿದೆ. ಲವ್ ಅಪ್ಪು ಎಂದಿದೆ.

LEAVE A REPLY

Please enter your comment!
Please enter your name here