ಭಾರತ ಕೊರೋನಾ ಎರಡನೇ ಅಲೆಯಲ್ಲಿ ಕೊರೋನಾದ ವಿರುದ್ದ ಜಯ ಸಾಧಿಸಲಿ ಎಂದು ಪ್ರಾರ್ಥಿಸಿ ಯುಎಇ ದೇಶವು ದುಬೈನ ಪ್ರಸಿದ್ದ ಹೋಟೆಲ್ ಬುರ್ಜ್ ಖಲೀಫಾ ಮೇಲೆ ಭಾರತದ ಧ್ವಜ ಹಾರಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯುಎಇ ಸರ್ಕಾರ, ಕೊರೋನಾದ ಈ ಸವಾಲಿನ ಸಮಯದಲ್ಲಿ ಭಾರತ ಮತ್ತು ಭಾರತೀಯರಿಗಾಗಿ ಪ್ರಾರ್ಥಿಸೋಣ ಹಾಗೂ ಸಹಾಯ ಮಾಡೋಣ ಎಂದು ಹಂಚಿಕೊಂಡಿದೆ. ಈ ಪೋಸ್ಟ್ನಲ್ಲಿ ಭಾರತದ ಧ್ವಜದ ಚಿತ್ರವನ್ನು ಬುರ್ಜ್ ಖಲೀಫಾ ಮೇಲೆ ಹಾರಿಸಿದೆ.
ಇತ್ತೀಚೆಗೆ ಕನ್ನಡದ ನಟ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಅನ್ನು ಬುರ್ಜ್ ಖಲೀಫಾ ಮೇಲೆ ಬಿಡುಗಡೆ ಮಾಡಲಾಗಿತ್ತು.