ರೈಲ್ವೆ ಬೋಗಿಗಳೇ ಈಗ ಕ್ಲಾಸ್ ರೂಮ್ – ದೇಶದಲ್ಲೇ ಮೊದಲ ಬಾರಿಗೆ ಮೈಸೂರಲ್ಲಿ ವಿಶೇಷ ಪ್ರಯತ್ನ

 

ಮೈಸೂರಲ್ಲಿ ಎರಡು ರೈಲು ಬೋಗಿಗಳನ್ನು ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಇಂಥದೊಂದು ವಿಶೇಷ ಸಾಹಸವನ್ನು ಮಾಡಿದ್ದಾರೆ ಮೈಸೂರಿನ ರೈಲ್ವೆ ಅಧಿಕಾರಿಗಳು.

ನಗರದ ಅಶೋಕಪುರಂ ನಲ್ಲಿ ಸರ್ಕಾರಿ ಪ್ರಾರ್ಥಮಿಕ ಶಾಲೆ ರೈಲ್ವೆ ಕಾಲೋನಿಯಲ್ಲಿ ಪಾಳುಬಿದ್ದ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದಾರೆ.

ಶಾಲೆಯ ಸ್ಥಿತಿ ಕಂಡ ರೈಲ್ವೆ ಅಧಿಕಾರಿಗಳು ಬಳಕೆಯಾಗದೆ ನಿಲ್ಲಿಸಲಾಗಿದ್ದ ಎರಡು ರೈಲ್ವೆ ಬಗೆಗಳನ್ನು ತರಗತಿಗಳನ್ನು ಆಗಿ ಪರಿವರ್ತಿಸಿದ್ದಾರೆ. ಒಂದೊಂದು ಬೋಗಿಯನ್ನು 2 ತರಗತಿ ಗಳನ್ನಾಗಿ ವಿಂಗಡಿಸಲಾಗಿದೆ. ಒಂದು ಬಗೆಯಲ್ಲಿ ನಾಲ್ಕು ಮತ್ತು ಐದನೆಯ ತರಗತಿ ನಡೆದರೆ ಉಳಿದ ಇನ್ನೊಂದು ಬಗೆಯಲ್ಲಿ ಮಕ್ಕಳ ಇತರ ಪಠ್ಯೇತರ ಚಟುವಟಿಕೆಗೆ ವ್ಯವಸ್ಥೆ ಮಾಡಲಾಗಿದೆ.

ಕ್ಲಾಸ್ ರೂಂ ಆಗಿ ಬದಲಾಗಿರುವ ಬೋಗಿಗಳಲ್ಲಿ ಫ್ಯಾನ್, ಲೈಟ್ ವ್ಯವಸ್ಥೆಯೂ ಇದೆ. ರೈಲು ಬೋಗಿಗಳಿಗೆ ಬಣ್ಣ ಬಳೆದು ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಚಿತ್ರ ರೂಪದಲ್ಲಿ ಬರೆಯಲಾಗಿದೆ.

LEAVE A REPLY

Please enter your comment!
Please enter your name here