ರೈಲು ಪ್ರಯಾಣ ದರದಲ್ಲಿ ಹೆಚ್ಚಳ..?

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ರೈಲ್ವೆ ಇನ್ನು ಮುಂದೆ ಪ್ರಯಾಣ ಮತ್ತು ಗೂಡ್ಸ್‌ ಸಾಗಾಣಿಕೆ ದರದಲ್ಲಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆಯಲ್ಲಿದೆ.

2014 ರಲ್ಲಿ ಎನ್‌ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್‌ 25 ರಂದು ದರಗಳನ್ನು ಹೆಚ್ಚಿಸಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ ಯಾದವ್‌,  ಪ್ರಯಾಣ ದರದಲ್ಲಿ ಮತ್ತು ಗೂಡ್ಸ್‌ ಸಾಗಾಣಿಕೆಯ ದರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದೇವೆ, ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಬಯಸುವುದಿಲ್ಲ.

ಈಗಾಗಲೇ ಗೂಡ್ಸ್‌ ಸಾಗಾಣಿಕೆಯ ದರ ದುಬಾರಿಯಿದೆ, ಹೀಗಾಗಿ ರಸ್ತೆ ಮೂಲಕ ಸಾಗುವ ಗೂಡ್ಸ್‌ಗಳನ್ನು ರೈಲ್ವೆ ಮೂಲಕ ಸಾಗಿಸುವಂತೆ ಮಾಡಲು ಹಲವಾರು ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here