ರೈಲು ಪ್ರಯಾಣಿಕರೇ ಗಮನಿಸಿ..  ಪ್ಯಾಸೆಂಜರ್ ರೈಲಾಗಿ ಎಕ್ಸ್ ಪ್ರೆಸ್ ರೈಲು..!

ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳನ್ನಾ ಗಿ ಮಾರ್ಪಾಡು ಮಾಡಲು ರೈಲ್ವೇ ಇಲಾಖೆ ಕಸರತ್ತು ಆರಂಭಿಸಿದೆ. 200 ಕಿಲೋ ಮೀಟರ್ ಗಿಂತ ಹೆಚ್ಚು ದೂರ ಓಡುವ ಪ್ಯಾಸೆಂಜರ್ ರೈಲುಗಳನ್ನು ಇದಕ್ಕಾಗಿ ಗುರುತಿಸಿದೆ. ಅಗತ್ಯವಿರುವ ಕಡೆ ಹಾಲ್ಟ್ ಗಳನ್ನು ಕಡಿಮೆ ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ.ಇಂದು ಸಂಜೆಯೊಳಗೆ ರೈಲುಗಳ ಪಟ್ಟಿ ಕಳಿಸುವಂತೆ ದಕ್ಷಿಣ ಮಧ್ಯ ರೈಲ್ವೇ ಸೇರಿದಂತೆ ಎಲ್ಲಾ ವಲಯಗಳಿಗೆ ರೈಲ್ವೇ ಇಲಾಖೆ ಸೂಚನೆ ನೀಡಿದೆ. ರೈಲ್ವೇ ಇಲಾಖೆಯ ತಾಜಾ ನಿರ್ಣಯದೊಂದಿಗೆ ಸಾಮಾನ್ಯ ಪ್ರಯಾಣಿಕರಿಗೆ, ಉದ್ಯೋಗಿಗಳ ಮೇಲೆ ಅಧಿಕ ಪ್ರಭಾವ ಬೀರಲಿದೆ.

ದ.ಮ ರೈಲ್ವೇ ವಲಯದ 62 ರೈಲುಗಳ ಮೇಲೆ ಪ್ರಭಾವ..

ರೈಲ್ವೇ ಬೋರ್ಡ್ ಆದೇಶದಿಂದಾಗಿ ದಕ್ಷಿಣ ಮಧ್ಯ ರೈಲ್ವೇ ವಲಯದ 62 ಪ್ಯಾಸೆಂಜರ್ ರೈಲುಗಳ ಮೇಲೆ ಪ್ರಭಾವ ಬೀರಲಿದೆ. ಕರ್ನಾಟಕದಿಂದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳಿಗೆ ರೈಲುಗಳು ಸಂಚರಿಸುತ್ತವೆ. ಈ ಪ್ಯಾಸೆಂಜರ್ ರೈಲುಗಳ ಪೈಕಿ ಯಾವ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

ಲಾಭ ನಷ್ಟಗಳೇನು..?

# ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳನ್ನಾಗಿ ಮಾರ್ಪಾಡು ಮಾಡಿದಲ್ಲಿ ರೈಲುಗಳ ವೇಗ ಹೆಚ್ಚಾಗಲಿದೆ. ಪ್ರಯಾಣದ ಅವಧಿಯೂ ಕಡಿಮೆ ಆಗಲಿದೆ.

# ರೈಲ್ವೇ ಕ್ರಾಸಿಂಗ್, ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಕೊರತೆ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ರೈಲುಗಳನ್ನು ಹೆಚ್ಚು ಸಮಯ ನಿಲ್ಲಿಸುವುದು ತಪ್ಪುತ್ತದೆ.

# ರೈಲ್ವೇ ಪ್ರಯಾಣ ದರ ಹೆಚ್ಚಾಗುತ್ತದೆ. ಸಾಮಾನ್ಯ ಪ್ರಯಾಣಿಕರಿಗೆ ಆರ್ಥಿಕ ಹೊರೆ ಬೀಳುತ್ತದೆ.

# ಚಿಕ್ಕ ಚಿಕ್ಕ ಸ್ಟೇಷನ್ ಗಳಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. ನೆರೆಯ ದೊಡ್ಡ ಸ್ಟೇಷನ್ ಗಳಿಗೆ ಹೋಗುವ ಅನಿವಾರ್ಯತೆ ಎದುರಾಗುತ್ತದೆ. ಅಲ್ಲದೇ, ರಸ್ತೆ ಮಾರ್ಗದ ಮೇಲೆ ಅವಲಂಬನೆ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here