ರೈತರ ಸಿಟ್ಟು ಸ್ಪೋಟ – ಸ್ಥಳದಿಂದಲೇ ಹೊರಟು ಹೋದ ಜೆಡಿಎಸ್‌ ಅತೃಪ್ತ ಶಾಸಕ

ರೈತರ ಜೊತೆ ವಾಗ್ವಾದಕ್ಕಿಳಿದ ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಬಳಿಕ ಸ್ಥಳದಿಂದಲೇ ರೈತರ ಆಕ್ರೋಶ ತಡೆಯಲಾಗದೇ ಹೊರಟೇಹೋದ ಘಟನೆ ಮೈಸೂರಲ್ಲಿ ನಡೆದಿದೆ. ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಇವತ್ತುಸ್ಥಳಕ್ಕೆ ವಸತಿ ಸಚಿವ ವಿ ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ ಮತ್ತು ಜಿಟಿಡಿ ರೈತರೊಂದಿಗೆ ಮಾತಾಡಲು ಮುಂದಾದರು. ಆ ಜಿಟಿಡಿ ಕ್ಷೇತ್ರದ ವ್ಯಾಪ್ತಿಗೆ ಬರುವ ಯಾಚೇಗೌಡನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ೧೮ ಲಕ್ಷ ರೂಪಾಯಿಯನ್ನು ಕೊಡಿಸಿ ಎಂದು ಆಗ್ರಹಿಸಿದರು.

ಆಗ ಸಿಟ್ಟಿಗೆದ್ದ ಜಿಟಿಟಿ ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದರು. ನಿಮ್ಮ ಮಗನೇ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ. ಆದರೆ ಸಂಬಂಧನೇ ಇಲ್ಲ ಅಂತೀರಾ ಎಂದು ರೈತರು ಆಕ್ರೋಶ ಹೊರಹಾಕಿದರು. ಈ ವೇಳೆ ಮಾತಿಗೆ ಮಾತು ಬೆಳೆಯಿತು. ಆಗ ಜೊತೆಯಲ್ಲಿದ್ದ ಪ್ರತಾಪ್‌ ಸಿಂಹ ಜಗಳ ಬಿಡಿಸಲು ಮಧ್ಯಪ್ರವೇಶ ಮಾಡಿದರು. ಆದರೆ ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಶಾಸಕ ಜಿಟಿಡಿ ಸ್ಥಳದಿಂದಲೇ ಹೊರಟುಹೋದರು.

LEAVE A REPLY

Please enter your comment!
Please enter your name here