ರೈತರ ದಿನ – ಒಡೆಯ ದರ್ಶನ್‌ ಹೇಳಿದ್ದೇನು..?

ಇವತ್ತು ರೈತರ ದಿನ. ಭಾರತದ ಐದನೇ ಪ್ರಧಾನಿ ಆಗಿದ್ದ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನವನ್ನು ಭಾರತದಲ್ಲಿ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತರಿಗಾಗಿ ವಿಶೇಷ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದ ಸ್ಮರಣಾರ್ಥ ಅವರ ಜನ್ಮದಿನವನ್ನೇ ಅನ್ನದಾತರ ದಿನವನ್ನಾಗಿ ಆಚರಿಸಲಾಗುತ್ತದೆ.

ಅಮೆರಿಕದಲ್ಲಿ ಅಕ್ಟೋಬರ್‌ 12ರಂದು, ನೇಪಾಳದಲ್ಲಿ ಜೇಷ್ಠ ಮಾಸದ 27ನೇ ದಿನದಂದು, ಘಾನಾದಲ್ಲಿ ಡಿಸೆಂಬರ್‌ ಮೊದಲ ಶುಕ್ರವಾರ, ಜಾಂಬಿಯಾದಲ್ಲಿ ಆಗಸ್ಟ್‌ ತಿಂಗಳ ಮೊದಲ ಸೋಮವಾರದಂದು ರೈತರ ದಿನವನ್ನು ಆಚರಿಸಲಾಗುತ್ತದೆ.

ಸಂಸದೆ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದ ವೇಳೆ ತಮ್ಮನ್ನು ರೈತ ಎಂದೇ ಕರೆಸಿಕೊಂಡಿದ್ದರು. ಪ್ರಚಾರದ ವೇಳೆ ಹಾಲು ಕರೆದು ಹೈನುಗಾರಿಕೆಯಲ್ಲಿನ ತಮ್ಮ ಜ್ಞಾನವನ್ನು ಸಾಬೀತುಪಡಿಸಿದರು. ಇದೇ ವೇಳೆ ಮೈಸೂರಲ್ಲಿರುವ ದರ್ಶನ್‌ ಫಾರ್ಮ್‌ ಹೌಸ್‌ ಮೇಲೆ ಐಟಿ ದಾಳಿ ನಡೆದಿದೆ ಎಂಬ ಸುದ್ದಿಯೂ ಹಬ್ಬಿತ್ತು. ಫಾರ್ಮ್‌ಹೌಸ್‌ನಲ್ಲಿ ಜಾನುವಾರುಗಳಿಗೆ ಹಾಕುವ ಬೂಸಾ, ಮೇವು, ಸೆಗಣಿ ಬಿಟ್ಟರೆ ಇನ್ನೇನೂ ಸಿಕ್ಕಿರಲಿಕ್ಕಿಲ್ಲ ಎಂದು ಒಡೆಯ ತಿರುಗೇಟು ನೀಡಿದ್ದರು.

LEAVE A REPLY

Please enter your comment!
Please enter your name here