ರೇಷನ್ ಕಾರ್ಡ್ ಬಳಕೆದಾರರೇ ಗಮನಿಸಿ..

ಒಂದು ದೇಶ-ಒಂದು ತೆರಿಗೆ ಬಳಿಕ ಇದೀಗ ಒಂದು ದೇಶ..ಒಂದು ರೇಷನ್ ಕಾರ್ಡ್ ಯೋಜನೆಯನ್ನು ಕೇಂದ್ರ ಸರ್ಕಾರ ಇಂದಿನಿಂದ ಜಾರಿಗೆ ತಂದಿದೆ. ಹೊಸ ವರ್ಷದ ಮೊದಲ ದಿನವೇ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಒಂದು ದೇಶ- ಒಂದು ಪಡಿತರ ಯೋಜನೆ ಜಾರಿಗೆ ಬಂದಿದೆ.

ಯಾವ್ಯಾವ ರಾಜ್ಯದಲ್ಲಿ ಒಂದು ದೇಶ-ಒಂದು ರೇಷನ್ ಕಾರ್ಡ್ ಜಾರಿಯಾಗಿದೆ
* ಕರ್ನಾಟಕ
* ಆಂಧ್ರ ಪ್ರದೇಶ
* ತೆಲಂಗಾಣ
* ಕೇರಳ
* ಗೋವಾ
* ಮಹಾರಾಷ್ಟ್ರ
* ಗುಜರಾತ್
* ಮಧ್ಯಪ್ರದೇಶ
* ರಾಜಸ್ಥಾನ
* ತ್ರಿಪುರ
* ಜಾರ್ಖಂಡ್
* ಹರಿಯಾಣ

ಒಂದು ದೇಶ – ಒಂದು ರೇಷನ್ ಕಾರ್ಡ್.. ಉಪಯೋಗ ಏನು..?
ಇನ್ನು ಮುಂದೆ ನಿಗದಿಯಾದ ಪಡಿತರ ಅಂಗಡಿಯಲ್ಲಿ ಮಾತ್ರ ಪಡಿತರ ಪಡೆಯಬೇಕೆಂಬ ನಿಯಮವಿಲ್ಲ. ಕರ್ನಾಟಕ ಸೇರಿ 12 ರಾಜ್ಯದ ಪಡಿತರದಾರರು, ಈ 12 ರಾಜ್ಯಗಳ ಪೈಕಿ ಎಲ್ಲಿಯೇ ಇದ್ದರೂ ತಮ್ಮ ಪಾಲಿನ ಪಡಿತರವನ್ನು ಸ್ಥಳೀಯವಾಗಿರುವ ರೇಷನ್ ಅಂಗಡಿಯಲ್ಲಿ ಪಡೆಯುವ ಅವಕಾಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ.

ದೇಶಾದ್ಯಂತ ಜಾರಿ ಯಾವಾಗ..?
2020ರ ಜೂನ್ ವೇಳೆಗೆ ಇಡೀ ದೇಶದಲ್ಲಿ ಒಂದು ದೇಶ-ಒಂದು ರೇಷನ್ ಕಾರ್ಡ್ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಹೊಸ ಫಾರ್ಮೆಟ್‍ನಲ್ಲಿ ರೇಷನ್ ಕಾರ್ಡ್ ರೂಪಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿ ಪ್ರದೇಶಗಳಲ್ಲಿ ವಿತರಿಸುವ ರೇಷನ್ ಕಾರ್ಡ್‍ಗಳು ಸ್ಟ್ಯಾಂಡರ್ಡ್ ಫಾರ್ಮೆಟ್‍ನಲ್ಲಿ ಇರಲಿವೆ.

LEAVE A REPLY

Please enter your comment!
Please enter your name here