ರೆಡ್‌, ಆರೆಂಜ್‌ಝೋನ್‌ಗಳಿಗೆ ಶೀಘ್ರವೇ ಕಾದಿದ್ಯಾ ಬಿಗ್‌ ಸರ್‌ಪ್ರೈಸ್‌..! – ಇಲ್ಲಿದೆ ಕಾರಣ

ಇನ್ನೆರಡು ಲಾಕ್‌ಡೌನ್‌ ವಿಸ್ತರಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ರೆಡ್‌ಜೋನ್‌ ಮತ್ತು ಅರೆಂಜ್‌ ಝೋನ್‌ ವಿಷ್ಯದಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ.

ಕೇಂದ್ರ ಗೃಹ ಸಚಿವಾಲಯ ಇವತ್ತು ಬಿಡುಗಡೆ ಮಾಡಿರುವ ಲಾಕ್‌ಡೌನ್‌ ಮಾರ್ಗಸೂಚಿಯ ಪ್ರಕಾರ ಕೊರೋನಾ ಕೇಸ್‌ ಆಧಾರದಲ್ಲಿ ಜಿಲ್ಲೆಗಳನ್ನೇ ರಾಜ್ಯ ಸರ್ಕಾರಗಳು ಎರಡು ವಲಯಗಳಾಗಿ ವಿಂಗಡಿಸಬಹುದಾಗಿದೆ.

ರೆಡ್‌ಝೋನ್‌ ಜಿಲ್ಲೆಯನ್ನೇ ನಗರಸಭೆ ವ್ಯಾಪ್ತಿಯೊಳಗಿನ ಪ್ರದೇಶ ಮತ್ತು ನಗರಸಭೆ ಹೊರಗಿನ ಪ್ರದೇಶವೆಂದು ಎರಡು ವಲಯಳಾಗಿ ವಿಂಗಡಿಸಬಹುದಾಗಿದೆ. ಒಂದು ವೇಳೆ ನಗರಸಭೆಯ ವ್ಯಾಪ್ತಿ ಹೊರಗಿನ ಪ್ರದೇಶದಲ್ಲಿ ಕಳೆದ ೨೧ ದಿನಗಳಲ್ಲಿ ಒಂದೇ ಒಂದು ಕೊರೋನಾ ಕೇಸ್‌ ಪತ್ತೆ ಆಗದೇ ಇದ್ದರೆ ಆಗ ಆ ಪ್ರದೇಶವನ್ನು ಆರೆಂಜ್‌ ಝೋನ್‌ ಎಂದು ಪರಿಗಣಿಸಿ ಅದರಲ್ಲಿ ಆರೆಂಜ್‌ಝೋನ್‌ಗಳಲ್ಲಿ ಅನುಮತಿ ನೀಡಲಾಗಿರುವ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದಾಗಿದೆ.

ಇನ್ನು ಆರೆಂಜ್‌ ಝೋನ್‌ ಜಿಲ್ಲೆಯಲ್ಲೂ ಆ ಜಿಲ್ಲೆಯನ್ನು ಎರಡು ವಲಯಗಳಾಗಿ ವಿಂಗಡಿಸಿ ನಗರಸಭೆ ವ್ಯಾಪ್ತಿ ಹೊರಗಿನ ಪ್ರದೇಶದಲ್ಲಿ ಕಳೆದ ೨೧ ದಿನಗಳಲ್ಲಿ ಒಂದೇ ಒಂದು ಕೊರೋನಾ ಕೇಸ್‌ ಪತ್ತೆ ಆಗದೇ ಇದ್ದಲ್ಲಿ ಆ ಪ್ರದೇಶವನ್ನು ಗ್ರೀನ್‌ಝೋನ್‌ ಎಂದು ಪರಿಗಣಿಸಬಹುದು. ಅಲ್ಲದೇ ಗ್ರೀನ್‌ಝೋನ್‌ ಜಿಲ್ಲೆಯಲ್ಲಿ ಕೊಟ್ಟಿರುವ ವಿನಾಯ್ತಿಯನ್ನೇ ಆರೆಂಜ್‌ಝೋನ್‌ ಜಿಲ್ಲೆಯೊಳಗಿರುವ ಗ್ರೀನ್‌ ವಲಯಕ್ಕೆ ಕೊಡಬಹುದು.

ಅಂದರೆ ಇಡೀ ಜಿಲ್ಲೆಯಲ್ಲೇ ರೆಡ್‌ ಅಥವಾ ಆರೆಂಜ್‌ ಎಂಬ ಕಾರಣಕ್ಕೆ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸುವ ಬದಲು ಕೇವಲ ಕೊರೋನಾ ಕೇಸ್‌ ಇಲ್ಲದ ರೆಡ್‌ ಮತ್ತು ಆರೆಂಜ್‌ ಝೋನ್‌ ಜಿಲ್ಲೆಯಲ್ಲಿನ ಇತರೆ ಪ್ರದೇಶಗಳಿಗೆ ರಿಲೀಫ್‌ ನೀಡುವುದು ಈ ಆದೇಶದ ಉದ್ದೇಶ.

ಏಪ್ರಿಲ್‌ ೩೦ರಂದು ಕೇಂದ್ರ ಸರ್ಕಾರ ಅಂತಿಮಗೊಳಿಸಿರುವ ಜಿಲ್ಲಾವಾರು ಪಟ್ಟಿಗಳ ಪ್ರಕಾರ ಮೂರು ಜಿಲ್ಲೆಗಳು ರೆಡ್‌ನಲ್ಲೂ, ಹದಿಮೂರು ಜಿಲ್ಲೆಗಳು ಆರೆಂಜ್‌ಝೋನ್‌ನಲ್ಲೂ ಮತ್ತು ೧೪ ಜಿಲ್ಲೆಗಳು ಗ್ರೀನ್‌ಝೋನ್‌ನಲ್ಲೂ ಇವೆ. ರೆಡ್‌ ಮತ್ತು ಆರೆಂಜ್‌ ಝೋನ್‌ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕೊರೋನಾ ಸೋಂಕಿನ ಪ್ರಕರಣ ಪತ್ತೆ ಆಗಿದ್ದು, ಜಿಲ್ಲೆಯ ಇತರೆ ಭಾಗಗಳು ಕೊರೋನಾ ಮುಕ್ತವಾಗಿವೆ.

LEAVE A REPLY

Please enter your comment!
Please enter your name here