ರೆಡ್‌ಝೋನ್‌ಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಿಗ್‌ ರಿಲೀಫ್‌ – ಇಲ್ಲಿದೆ ಏನಿರಲ್ಲ, ಏನಿರುತ್ತೆ ಪಟ್ಟಿ

ಪ್ರಾತಿನಿಧಿಕ ಚಿತ್ರ

ದೇಶಾದ್ಯಂತ ಮತ್ತೆ ಎರಡು ವಾರ ಲಾಕ್‌ಡೌನ್‌ ವಿಸ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೆಡ್‌ಝೋನ್‌ಗಳಲ್ಲಿ ಕೆಲವೊಂದಿಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಿದೆ.

ವಿಶೇಷ ಏನೆಂದರೆ ರೆಡ್‌ಝೋನ್‌ನಲ್ಲಿ ಪ್ರಧಾನಿ ಮೋದಿ ಸರ್ಕಾರ ಕೈಗಾರಿಕೆಯೂ ಒಳಗೊಂಡಂತೆ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ವಿನಾಯ್ತಿ ನೀಡಿದೆ.

ಈ ಹಿಂದೆ ಎರಡು ಬಾರಿ ಲಾಕ್‌ಡೌನ್‌ ಜಾರಿ ಆದಾಗ ಕೇಂದ್ರ ಸರ್ಕಾರ ಕೈಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗಳನ್ನು ನಗರಸಭೆ ಮತ್ತು ಪಾಲಿಕೆ ಒಳಗೆ ನಿಷೇಧಿಸಿ ಗ್ರಾಮೀಣ ಭಾಗದಲ್ಲಷ್ಟೇ ಅನುಮತಿ ನೀಡಿತ್ತು. ಆದರೆ ಈ ಬಾರಿ ಆ ನಿಯಮ ಇಲ್ಲ. ಅಂದರೆ ನಗರ ವ್ಯಾಪ್ತಿಯಲ್ಲೂ ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ.

ಕೇಂದ್ರ ಸರ್ಕಾರದ ಪಟ್ಟಿ ಪ್ರಕಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರಷ್ಟೇ ರೆಡ್‌ಝೋನ್‌ನಲ್ಲಿದೆ. ಆದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ಈ ಮೂರು ಜಿಲ್ಲೆಗಳ ಜೊತೆಗೆ ವಿಜಯಪುರ, ಬೆಳಗಾವಿ, ಬಾಗಲಕೋಟೆಯೂ ರೆಡ್‌ಝೋನ್‌ನಲ್ಲಿದೆ.

ಬೆಂಗಳೂರಲ್ಲಿ ಕಂಟೈನ್‌ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಕಡೆ ಕೈಗಾರಿಕೆಗಳಿಗೆ ಅನುಮತಿ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು.

ರೆಡ್‌ಝೋನ್‌ನಲ್ಲಿ ಇವೆಲ್ಲದ್ದಕ್ಕೂ ಅವಕಾಶ:

೧) ಅನುಮತಿ ನೀಡಲಾದ ಚಟುವಟಿಕೆಗೆ ಕಾರು ಮತ್ತು ಬೈಕ್‌ನಲ್ಲಿ ಪ್ರಯಾಣಿಸಲು ಅವಕಾಶ. ಕಾರಲ್ಲಿ ಡ್ರೈವರ್‌ ಜೊತೆಗೆ ಮತ್ತೊಬ್ಬ ಪ್ರಯಾಣಿಕ ಹಾಗೂ ಬೈಕ್‌ನಲ್ಲಿ ಒಬ್ಬರಷ್ಟೇ ಓಡಾಡಬೇಕು.

೨) ರೆಡ್‌ಝೋನ್‌ನ ನಗರಪ್ರದೇಶಗಳಲ್ಲಿ ಯಾವುದಕ್ಕೆಲ್ಲ ಅವಕಾಶ:

ವಿಶೇಷ ಆರ್ಥಿಕ ವಲಯ, ಇಂಡಸ್ಟ್ರೀಯಲ್‌ ಎಸ್ಟೇಟ್‌, ಇಂಡಸ್ಟ್ರೀಯಲ್‌ ಟೌನ್‌, ಇಂಡಸ್ಟ್ರೀಯಲ್‌ ಟೌನ್‌ಶಿಪ್‌ಗಳಲ್ಲಿ ಬರುವ ಕೈಗಾರಿಕೆಗಳು, ಉತ್ಪಾದಲ ಘಟಕಗಳು, ಕಚ್ಚಾ ವಸ್ತು ಉತ್ಪಾದಕ ಘಟಕಗಳು, ಐಟಿ ಮತ್ತು ಹಾರ್ಡ್‌ವೇರ್‌ ( ಈ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಕೈಗಾರಿಕೆಗಳು ಬರುತ್ತವೆ)

೩) ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು (ಕಟ್ಟಡ, ರಸ್ತೆ ಒಳಗೊಂಡು)

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ ಎರಡು ಬಾರಿ ಲಾಕ್‌ಡೌನ್‌ ಜಾರಿ ಆದಾಗ ಕೇಂದ್ರ ಸರ್ಕಾರ ಕೈಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗಳನ್ನು ನಗರಸಭೆ ಮತ್ತು ಪಾಲಿಕೆ ಒಳಗೆ ನಿಷೇಧಿಸಿ ಗ್ರಾಮೀಣ ಭಾಗದಲ್ಲಷ್ಟೇ ಅನುಮತಿ ನೀಡಿತ್ತು. ಆದರೆ ಈ ಬಾರಿ ಆ ನಿಯಮ ಇಲ್ಲ. ಅಂದರೆ ನಗರ ವ್ಯಾಪ್ತಿಯಲ್ಲೂ ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ.

೪) ಗ್ರಾಮೀಣ ಭಾಗದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು

೫) ನಗರಸಭೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಮಾರ್ಕೆಟ್‌ ಮತ್ತು ಮಾರ್ಕೆಟ್‌ನಲ್ಲಿರುವ ಅಗತ್ಯ ವಸ್ತು ಮಾರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

೭) ನಗರ ಪ್ರದೇಶದ ವಸತಿ ಸಂಕೀರ್ಣದಲ್ಲಿರುವ ಅಗತ್ಯ ಮತ್ತು ಅವಶ್ಯಕವಲ್ಲದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ತೆರೆಯಬಹುದಾಗಿದೆ.

೮) ಗ್ರಾಮೀಣ ಭಾಗದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

೯) ಇ-ಕಾರ್ಮಸ್‌ಗಳಿಗೆ (ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ) ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ

೧೦) ಖಾಸಗಿ ಕಚೇರಿಗಳಿಗೆ ಗರಿಷ್ಠ ಶೇಕಡಾ ೩೩ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

೧೧) ಉಳಿದಂತೆ ಎಲ್ಲಾ ರೀತಿಯ ಅಗತ್ಯಸೇವೆಗಳು – ಕೃಷಿ, ಸರ್ಕಾರಿ ಕಚೇರಿಗಳು (ಶೇಕಡಾ ೩೩ರಷ್ಟು ನೌಕರರು ಮಾತ್ರ), ಬ್ಯಾಂಕ್‌, ಅಂಚೆ ಕಚೇರಿ, ಜಲ ಮಂಡಳಿ, ಎಸ್ಕಾಂಗಳು, ಕೋರಿಯರ್‌ ಸೇವೆ, ಕೇಬಲ್‌, ಇಂಟರ್‌ನೆಟ್‌, ಎಪಿಎಂಸಿ, ಮಾಂಸ ಮಾರಾಟ, ಮೀನುಗಾರಿಕೆ, ಹೈನುಗಾರಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳು

೧೨) ಅಗತ್ಯ ಸೇವೆ ವಾಹನಗಳ ಓಡಾಟ (ಈ ಹಿಂದಿನ ನಿಯಮವೇ ಮುಂದುವರಿಯುತ್ತೆ – ನಿರ್ಬಂಧ ಇಲ್ಲ)

೧೩) ಮದ್ಯ ಮಾರಾಟ ಇಲ್ಲ

೧೪) ಸಲೂನ್‌, ಜ್ಯುವೆಲ್ಲರಿ ಅಂಗಡಿ, ಸ್ಪಾ, ಬ್ಯೂಟಿ ಪಾರ್ಲರ್‌ ಬಂದ್‌

LEAVE A REPLY

Please enter your comment!
Please enter your name here