ರಿವರ್ಸ್ ತಗೆಯುವಾಗ ಬಾವಿಗೆ ಬಿದ್ದ ಸೊಸೆ-ಕಾರು

ಬ್ರಹ್ಮಾವರ: ರಿವರ್ಸ್ ತೆಗೆಯುವಾಗ ಆದ ಅಚಾತುರ್ಯದಿಂದ ಕಾರು ಬಾವಿಗೆ ಬಿದ್ದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ ಮನೆಯ ಬಾವಿಗೆ ಕಾರು ಬಿದ್ದಿದ್ದು, ನಿನ್ನೆ ಸಂಜೆ ಈ ಘಟನೆ ನಡೆದಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಶ್ರೀನಿವಾಸ ಅಡಿಗರ ಸೊಸೆ ಕಾರನ್ನು ರಿಸರ್ವ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ಪ್ರೆಸ್ ಮಾಡಿ ಈ ಅವಾಂತರ ಸಂಭವಿಸಿದೆ.

ಒಮ್ಮೆಲೆ ವೇಗವಾಗಿ ಹಿಮ್ಮುಖ ಚಲಿಸಿದ ಕಾರು ನೇರ ಮನೆಯ ಬಾವಿಗೆ ಬಿದ್ದಿದ್ದು, ಬಾವಿಗೆ ಬೀಳುತ್ತಿದ್ದಂತೆ ಕೆಳಗೆ ಹಾರಿದ ಚಾಲಕಿ ಅಪಾಯದಿಂದ ಪಾರಾಗಿದ್ದಾರೆ. ರಾತ್ರಿ ವೇಳೆ ಸ್ಥಳೀಯರು ಮತ್ತು ಕ್ರೇನ್ ಸಹಾಯದಿಂದ ಬಾವಿಯಿಂದ ಕಾರು ಮೇಲಕ್ಕೆ ಎತ್ತಲಾಗಿದೆ.

LEAVE A REPLY

Please enter your comment!
Please enter your name here