ರಾಹುಲ್‌ ಗಾಂಧಿಯನ್ನ ಟ್ಯೂಬ್‌ಲೈಟ್‌ಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಟ್ಯೂಬ್‌ಲೈಟ್‌ಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರ ಕೊಟ್ಟ ಮೋದಿ, ನಿನ್ನೆ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕೆಲಸ ಸಿಗದೇ ಯುವಕರು ಪ್ರಧಾನಿಗೆ ಬಡಿಗೆಯಿಂದ ಹೊಡೆಯುತ್ತಾರೆ ಎಂದು ರಾಹುಲ್‌ ಕೊಟ್ಟಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.

ನಾನು ೩೦ ರಿಂದ ೪೦ ನಿಮಿಷ ಮಾತಾಡುತ್ತಿದ್ದೇನೆ. ಆದರೆ ಕರೆಂಟ್‌ ಪಾಸಾಗಲು ಇಷ್ಟು ಹೊತ್ತು ಬೇಕಾಯಿತು. ಕೆಲವೊಂದು ಟ್ಯೂಬ್‌ಲೈಟ್‌ಗಳು ಹಾಗೇ ಇರುತ್ತವೆ

ಎಂದು ವ್ಯಂಗ್ಯವಾಡಿದರು. ಪ್ರಧಾನಿ ಮೋದಿಯ ಈ ಮಾತಿನೇಟಿಗೆ ಬಿಜೆಪಿ ಸಂಸದರೆಲ್ಲ ನಕ್ಕು ಬಿಟ್ಟರು.

ಕಳೆದ ೬೦ ವರ್ಷಗಳಲ್ಲಿ ಯಾವೊಬ್ಬ ಕಾಂಗ್ರೆಸ್‌ ನಾಯಕರನೂ ಸ್ವಸಮರ್ಥರಾಗಿಲ್ಲ. ಒಬ್ಬ ನಾಯಕನ ಪ್ರಣಾಳಿಕೆ ಬಗ್ಗೆ ಕೇಳಿದೆ, ಅವರು ಹೇಳುತ್ತಾರೆ, ೬ ತಿಂಗಳಲ್ಲಿ ಮೋದಿಗೆ ಬಡಿಗೆ ಬಡಿಯುತ್ತೇವೆ ಎಂದು. ಆದರೆ ಇದು ಕಷ್ಟ ಎಂದು ನಾನು ಭಾವಿಸುತ್ತೇನೆ, ಹೀಗಾಗಿ ಆರು ತಿಂಗಳು ಟೈಂ ತೆಗೆದುಕೊಳ್ಳುತ್ತಿದ್ದಾರೆ. ನಾನು ಆ ಆರು ತಿಂಗಳಲ್ಲಿ ಸಿದ್ಧನಾಗುತ್ತೇನೆ ಮತ್ತು ಸೂರ್ಯ ನಮಸ್ಕಾರ ಮಾಡಿ ರೆಡಿ ಆಗುತ್ತೇನೆ. ನನ್ನ ವಿರುದ್ಧ ೨೦ ವರ್ಷಗಳಲ್ಲಿ ಈ ರೀತಿಯ ನಿಂದನೆಗಳನ್ನು ಮಾಡಲಾಗುತ್ತಿದೆ. ಆದರೆ ನಾನು ನನ್ನನ್ನು ನಿಂದನೆ ಪ್ರತಿರೋಧಕ ಮತ್ತು ದಂಡ ಪ್ರತಿರೋಧನಕಾಗಿ ಮಾಡಿಕೊಳ್ಳುತ್ತೇನೆ

ಎಂದು ಪ್ರಧಾನಿ ಮೋದಿ ಹೇಳಿದರು.

LEAVE A REPLY

Please enter your comment!
Please enter your name here