ರಾಷ್ಟ್ರೀಯ ನಿರುದ್ಯೋಗ ನೋಂದಣಿಗಾಗಿ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎನ್‌ಆರ್‌ಸಿಗೆ ಪ್ರತಿಯಾಗಿ ವಿರೋಧ ಪಕ್ಷ ಕಾಂಗ್ರೆಸ್‌ ರಾಷ್ಟ್ರೀಯ ನಿರುದ್ಯೋಗ ನೋಂದಣಿಯನ್ನು ಘೋಷಿಸುವಂತೆ ಆಗ್ರಹಿಸಿದೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮಿಸ್ಡ್‌ ಕಾಲ್‌ ಅಭಿಯಾನ ಆರಂಭಿಸಿದೆ.

ಯುವ ಕಾಂಗ್ರೆಸ್‌ ಘಟಕ ಆರಂಭಿಸಿರುವ ಮಿಸ್ಡ್‌ ಕಾಲ್‌ ಅಭಿಯಾನದ ಸಂಖ್ಯೆ 8151994411. ಈ ಸಂಖ್ಯೆ ಮಿಸ್ಡ್‌ ಕಾಲ್‌ ಕೊಡುವ ಮೂಲಕ ಎನ್‌ಆರ್‌ಯು ಘೋಷಣೆಗೆ ಒತ್ತಡ ಹೇರುವುದು ಕಾಂಗ್ರೆಸ್‌ನ ಅಭಿಯಾನದ ಉದ್ದೇಶ.

ದೇಶದಲ್ಲಿ 2014ರ ಬಳಿಕ 3 ಕೋಟಿ 68 ಲಕ್ಷ ಉದ್ಯೋಗ ನಷ್ಟವಾಗಿದೆ. ನಿರುದ್ಯೋಗ ಪ್ರಮಾಣ 42 ವರ್ಷಗಳ ಬಳಿಕ ಅಧಿಕವಾಗಿದ್ದು, ಉದ್ಯೋಗ ಸೃಷ್ಟಿ ಸದ್ಯ ದೇಶದ ಅತೀ ದೊಡ್ಡ ಸಮಸ್ಯೆ ಆಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

LEAVE A REPLY

Please enter your comment!
Please enter your name here