ರಾತ್ರಿ ಮಲಗುವ ಮುನ್ನ ಯಾಕೆ ಮುಖ ತೊಳೆಯಬೇಕು..?

ನಮ್ಮಲ್ಲಿ ಹೆಚ್ಚಿನವರು ನಮ್ಮ ಚರ್ಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಪ್ರವೃತ್ತಿಯನ್ನು ಹೊಂದಿದ್ದೇವೆ. ಕೆಲವು ಮಹಿಳೆಯರು ಮಲಗುವ ಮುನ್ನ ತಮ್ಮ ಮುಖದ ಮೇಕಪನ್ನು ತೆಗೆಯದೇ ಹಾಗೆಯೇ  ಬಿಡುತ್ತಾರೆ, ಇಂತಹ ಅಭ್ಯಾಸಗಳಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ.

ನೀವು ಎಷ್ಟೇ ದಣಿದಿದ್ದರೂ ನೀವು ಮಲಗುವ ಮೊದಲು ನಿಮ್ಮ ಮುಖವನ್ನು ತೊಳೆಯಬೇಕು ಮತ್ತು ಮೇಕಪ್‌ ಬಳಸಿದ್ದಲ್ಲಿ ಅದನ್ನೂ ಸಹ ತೆಗೆಯಲು ಮರೆಯದಿರಿ. ಯಾಕೆಂದರೆ ಇದರಿಂದ ಬೆಳಗ್ಗೆ ನೀವು ಏಳುವಾಗ ನಿಮ್ಮ ಚರ್ಮದ ರಂಧ್ರ, ಕಣ್ಣುಗಳಿಗೆ ಕಿರಿಕಿರಿಯಾಗುವುದು, ಅದೇ ರೀತಿ ಮೇಕಪ್ ತಲೆದಿಂಬಿಗೂ ತಾಗಬಹುದು.

ರಾತ್ರಿ ಮಲಗುವ ಮುನ್ನ ಯಾಕೆ ಮುಖ ತೊಳೆದರೆ ಏನು ಲಾಭ ?

ನಿಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ: ರಾತ್ರಿಯಲ್ಲಿ ನೀವು ನಿಮ್ಮ ಮುಖವನ್ನು ತೊಳೆದಾಗ ಎಲ್ಲಾ ಕಲ್ಮಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಸ್ವಚ್ಛ ಮತ್ತು ಹೊಳೆಯುವಂತೆ ಮಾಡುತ್ತದೆ.

ನಿಮ್ಮ ಚರ್ಮವನ್ನು ಪುನರ್‌ ಯೌವ್ವನಗೊಳಿಸಲು ಸಹಾಯ ಮಾಡುತ್ತದೆ: ನಾವು ರಾತ್ರಿಯಲ್ಲಿ ನಿದ್ದೆ ಮಾಡುವಾಗ ನಮ್ಮ ದೇಹವು ರಿಪೇರಿ ಮೋಡ್‌ಗೆ ಹೋಗುತ್ತದೆ, ಅದಕ್ಕಾಗಿಯೇ ನೀವು ಮಲಗುವಾಗ ನಿಮ್ಮ ಮುಖದಲ್ಲಿ ಮೇಕಪ್‌ ಅಥವಾ ಯಾವುದೇ ರೀತಿಯ ಧೂಳು ಇರದಂತೆ ಗಮನವಹಿಸಿ, ಇದು ನಿಮ್ಮ ಚರ್ಮವು ನವ ಯೌವನ ಪಡೆಯುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು.

ಮಂದ ಚರ್ಮದೊಂದಿಗೆ ಹೋರಾಡುತ್ತದೆ: ನಿಮ್ಮ ಚರ್ಮವು ಧೂಳು, ಮಾಲಿನ್ಯ, ಧೂಳಿನ ಸಂಪರ್ಕಕ್ಕೆ ಬರುವುದರಿಂದ, ಅದು ಮಂದತೆಯ ಲಕ್ಷಣಗಳನ್ನು ತೋರಿಸುತ್ತದೆ. ಇದು ನಿಮ್ಮ ಚರ್ಮದ ಮೇಲೆ ಗುರುತುಗಳಿಗೆ ಕಾರಣವಾಗಬಹುದು ಮತ್ತು ಅದು ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ, ಈ ಮಂದತೆಯ ವಿರುದ್ಧ ಹೋರಾಡಲು ನೀವು ಪ್ರತಿ ರಾತ್ರಿ ನಿಮ್ಮ ಮುಖವನ್ನು ಸರಿಯಾಗಿ ತೊಳೆಯಲು ಮರೆಯದಿರಿ.

ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ಅಕಾಲಿಕವಾಗಿ ತೋರುವ ವಯಸ್ಸಾದ ಚಿಹ್ನೆಯನ್ನು ಸುಲಭವಾಗಿ ನಿವಾರಿಸಲು, ಸನ್‌ ಬರ್ನ್‌ ನಿಂದ ಆದ ಕಲೆ ಕಡಿಮೆ ಮಾಡಲು, ಮತ್ತು ಇತರ ಕಲೆಗಳನ್ನು ತೊಡೆದುಹಾಕುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಲು ಮರೆಯದಿರಿ.

LEAVE A REPLY

Please enter your comment!
Please enter your name here