ರಾಜ್ಯ ಸರ್ಕಾರದಿಂದ ಅನ್‌ಲಾಕ್ ಮಾರ್ಗಸೂಚಿ ಪ್ರಕಟ – ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಅನ್‌ಲಾಕ್ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮೂರು ವಿಭಾಗಗಳಲ್ಲಿ ಅನ್‌ಲಾಕ್ ಮಾರ್ಗಸೂಚಿಯನ್ನು ವಿಂಗಡಿಸಿ ಪ್ರಕಟಿಸಿದೆ.

ಇಡೀ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅಂತರ್‌ರಾಜ್ಯ ಮತ್ತು ಅಂತರ್‌ಜಿಲ್ಲೆ ಓಡಾಟಕ್ಕೆ ನಿರ್ಬಂಧ ಇಲ್ಲ,

ಮೊದಲ ವಿಭಾಗ:
ಬೆಂಗಳೂರು, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್.

ಅನುಮತಿ ನೀಡಿರುವ ಚುಟವಟಿಕೆಗಳು:

– ಎಲ್ಲ ರೀತಿಯ ಕೈಗಾರಿಕೆಗಳಿಗೆ ಅನುಮತಿ – ಶೇ.50ರಷ್ಟು ಸಿಬ್ಬಂದಿಯೊಂದಿಗೆ. ಆದರೆ ಗಾರ್ಮೆಂಟ್ಸ್  ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
– ಎಲ್ಲ ರೀತಿಯ ಅಂಗಡಿಗಳು (ಅಗತ್ಯ ಮತ್ತು ಅಗತ್ಯವಲ್ಲದ ಅಂಗಡಿಗಳೂ ಸೇರಿ) ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ತೆರೆಯಬಹುದು.
– ಹವಾನಿಯಂತ್ರಿತ ಶಾಪಿಂಗ್ ಕಾಂಪ್ಲೆಕ್ಸ್ ಗಳು ಮತ್ತು ಅಂಗಡಿಗಳಿಗೆ ಅನುಮತಿ ಇಲ್ಲ.
– ಎಲ್ಲ ಹೋಟೆಲ್‌ಗಳು, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 50ರಷ್ಟು ಗ್ರಾಹಕರು ಆಹಾರ ಸೇವನೆ ಮಾಡಲು ಅವಕಾಶ. ಆದರೆ ಅಲ್ಲೇ ಮದ್ಯ ಸೇವನೆ ಮಾಡುವಂತಿಲ್ಲ.
– ಆದರೆ ಪಬ್‌ಗಳಿಗೆ ಅನುಮತಿ ಇಲ್ಲ
– ಎಸಿ ಇರುವ ಹೋಟೆಲ್, ರೆಸ್ಟೋರೆಂಟ್, ಬಾರ್, ಕ್ಲಬ್‌ಗಳಿಗೆ ಅನುಮತಿ ಇಲ್ಲ
– ಲಾಡ್ಜ್, ರೆಸಾರ್ಟ್ ಗಳಲ್ಲಿ ಶೇಕಡಾ 50ರಷ್ಟು ಗ್ರಾಹಕರಿಗೆ ಅನುಮತಿ
– ಸಿನಿಮಾ, ರಿಯಾಲಿಟಿ ಶೋಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ
– ಪಾರ್ಕ್ ಗಳು ಬೆಳಗ್ಗೆ 5ರಿಂದ ಸಂಜೆ 6 ಗಂಟೆವರೆಗೆ ತೆರೆಯಬಹುದು
– ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ
– ಎಸಿ ಇಲ್ಲದ ಜಿಮ್‌ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಅವಕಾಶ
– ಮೆಟ್ರೋ ರೈಲುಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ
– ಎಲ್ಲ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ- ಪ್ರೇಕ್ಷಕರು ಇರುವಂತಿಲ್ಲ
– ಎಲ್ಲ ಸರ್ಕಾರಿ ಕಚೇರಿಗಳು ತೆರೆಯಬಹುದು – ಶೇ.50ರಷ್ಟು ನೌಕರರಿಗೆ ಅವಕಾಶ
– ಎಲ್ಲ ಖಾಸಗಿ ಕಚೇರಿಗಳಿಗೆ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಅವಕಾಶ
– ಆರೋಗ್ಯ ಸಂಬಂಧಿಸಿದ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ

ಎರಡನೇ ವಿಭಾಗ:

ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ದಿನಾಂಕ: 11-06-2021 ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

ಅನುಮತಿ ನೀಡಲಾಗಿರುವ ಚಟುವಟಿಕೆಗಳು:

– ಎಲ್ಲ ರೀತಿಯ ಕೈಗಾರಿಕೆಗಳಿಗೆ ಅನುಮತಿ – ಶೇ.50ರಷ್ಟು ಸಿಬ್ಬಂದಿ
– ಅಗತ್ಯ ಅಂಗಡಿಗಳು, ಹೂ-ತರಕಾರಿ, ಮೀನು-ಮಾಂಸ ಮಾರಾಟಕ್ಕೆ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ.
– ಗಾರ್ಮೆಂಟ್ಸ್ ಗಳಿಗೆ ಶೇಕಡಾ 30ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ.
– ಕಟ್ಟಡ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
– ಪಾರ್ಕ್ ಗಳನ್ನು ತೆರೆಯಲು ಬೆಳಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿದೆ.
– ಬೀದಿಬದಿ ವ್ಯಾಪಾರಕ್ಕೆ ಮಧ್ಯಾಹ್ನ 2 ಗಂಟೆವವರೆಗೆ ಅವಕಾಶ ನೀಡಲಾಗಿದೆ.
– ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರ ಪ್ರಯಾಣಕ್ಕಷ್ಟೇ ಅವಕಾಶ ನೀಡಲಾಗಿದೆ.
– ಕನ್ನಡಕ ಅಂಗಡಿಗಳನ್ನು ತೆರೆಯಬಹುದು

ಮೂರನೇ ವಿಭಾಗ:
ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಯಲಿದೆ

ನೈಟ್‌ಕರ್ಫ್ಯೂ:

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಜೆ 7 ಗಂಟೆಯಿAದ ಬೆಳಗ್ಗೆ 5 ಗಂಟೆವರೆಗೆ. ನೈಟ್‌ಕರ್ಫ್ಯೂನಲ್ಲಿ ಬಸ್‌ಗಳ ಓಡಾಟ ಎಂದಿನಂತೆ ಇರಲಿದೆ. ನಿಲ್ದಾಣಗೆ ಹೋಗಲು ಅಥವಾ ನಿಲ್ದಾಣಗಳಿಂದ ಹೋಗಲು ಖಾಸಗಿ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬಹುದಾಗಿದೆ. (ಆಟೋ, ಟ್ಯಾಕ್ಸಿ ಒಳಗೊಂಡು).

ವಾರಾಂತ್ಯದ ಲಾಕ್‌ಡೌನ್:

ಶನಿವಾರ, ಭಾನುವಾರ 2 ದಿನ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದೆ.

ವಾರಾಂತ್ಯದ ಲಾಕ್‌ಡೌನ್‌ನಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಎಲ್ಲ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ.

ವಾರಾಂತ್ಯದಲ್ಲಿ ಬಸ್, ರೈಲು, ವಿಮಾನಗಳ ಓಡಾಟ ಇರಲಿದೆ. ನಿಲ್ದಾಣಗೆ ಹೋಗಲು ಅಥವಾ ನಿಲ್ದಾಣಗಳಿಂದ ಹೋಗಲು ಖಾಸಗಿ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬಹುದಾಗಿದೆ. (ಆಟೋ, ಟ್ಯಾಕ್ಸಿ ಒಳಗೊಂಡು).

ಮದುವೆ:

ಮದುವೆಗಳಿಗೆ ಈಗಿರುವ ನಿರ್ಬಂಧ ಮುಂದುವರಿಯಲಿದೆ.

LEAVE A REPLY

Please enter your comment!
Please enter your name here