ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳು

ಬೆಂಗಳೂರು : ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಕುರಿತಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಮಾಹಿತಿ ನೀಡಿದ್ದು ಅವು ಹೀಗಿವೆ.

  • ಕರ್ನಾಟಕ ಲೋಕಸೇವಾ ಆಯೋಗದ ಎ ಮತ್ತು ಬಿ ಗ್ರೇಡ್ ಹುದ್ದೆಗಳಿಗೆ ಸಂದರ್ಶನ ರದ್ದು ಮಾಡಲಾಗಿದೆ. ಅದರಂತೆ ಲಿಖಿತ ಪರೀಕ್ಷೆ ಮಾತ್ರ ಮಾನದಂಡವಾಗಿ ಪರಿಗಣಿಸಲು ಸಂಪುಟ ಒಪ್ಪಿಗೆ ನೀಡಿದೆ. ಕೆಲವು ಪ್ರೊಫೆಶನಲ್ ಗೆ ಸಂದರ್ಶನ ಅವಶ್ಯಕತೆ ಇಲ್ಲ ಎನ್ನುವ ಕಾರಣಕ್ಕಾಗಿ ರದ್ದು ಮಾಡಲಾಗಿದೆ
  • ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ. ಶಾಪ್ಸ್ ಆಂಡ್ ಇಂಡಸ್ಟ್ರಿಯಲ್ ಎಸ್ಟಾಬ್ಲಿಸ್ಮೆಂಟ್ ಕಾಯ್ದೆಗೆ ತಿದ್ದುಪಡಿ ತರುತ್ತೇವೆ. ಅದರಂತೆ ರಾತ್ರಿ ಪಾಳಿ ಕೆಲಸ ಮಾಡುವ ಮಹಿಳೆಯರಿಗೆ ಸೇವಾ ಭದ್ರತೆ, ರಕ್ಷಣೆ ಅಂಶಗಳು ಕಾಯ್ದೆಯಲ್ಲಿ ಇರುತ್ತೆ
  • ವಿಧಾನಸಭೆ ಜಂಟಿ ಅಧಿವೇಶನ ಫೆಬ್ರವರಿ ೧೭ರಿಂದ ೨೧ರ ತನಕ ನಡೆಯಲಿರುವುದು. ರಾಜ್ಯಪಾಲರು ಫೆಬ್ರವರಿ ೧೭ ರಂದು ಭಾಷಣ ಮಾಡಲಿದ್ದಾರೆ.
  • ಮಾರ್ಚ್ ೨ ರಿಂದ ಬಜೆಟ್ ಅಧಿವೇಶನ, ಮಾರ್ಚ್ ೫ರಂದು ರಾಜ್ಯ ಬಜೆಟ್ ಮಂಡನೆ ಮಂಡನೆ ನಡೆಯಲಿರುವುದು ಎಂದು ಅವರು ತಿಳಿಸಿದ್ದಾರೆ
  • ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ಮಡಿಕೇರಿಯಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ೧೨.೫ ಕೋಟಿ ರೂ ಮಂಜೂರು
  • ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಕನ್ನಡದಲ್ಲಿ ಓದಿದವರಿಗೆ ಮೀಸಲಾತಿ, ಕನಿಷ್ಠ ೧೦ ವರ್ಷ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಶೇಕಡಾ ೨೫ % ರಷ್ಟು ಮೀಸಲಾತಿಗೆ ತೀರ್ಮಾನ

LEAVE A REPLY

Please enter your comment!
Please enter your name here