ರಾಜ್ಯಸಭಾ ಚುನಾವಣೆ – ಕರ್ನಾಟಕ ಬಿಜೆಪಿ ನಾಯಕರಿಗೆ ಅಮಿತ್ ಶಾ ಶಾಕ್..!

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅಚ್ಚರಿಯ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ.

ಬಿಜೆಪಿ ಅಭ್ಯರ್ಥಿಗಳಾಗಿ ಬೆಳಗಾವಿ ಜಿಲ್ಲಾ ಬಿಜೆಪಿ ಉಸ್ತುವಾರಿ ಈರಣ್ಣ ಕಡಾಡಿಯವರನ್ನೂ ಕಣಕ್ಕಿಳಿಸಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಬಿಜೆಪಿ ಉಸ್ತುವಾರಿ ಆಗಿದ್ದ ಅಶೋಕ್‌ ಗಸ್ತಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಹಾಲಿ ರಾಜ್ಯಸಭಾ ಸಂಸದರಾಗಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರಭಾಕರ್‌ ಕೋರೆ ಅವರ ಸದಸ್ಯತ್ವ ಕೊನೆ ಆಗುತ್ತಿದ್ದು, ಅವರು ಮತ್ತೊಮ್ಮೆ ಸಂಸದರಾಗಲು ಟಿಕೆಟ್‌ ಬಯಸಿದ್ದರು.

ಇನ್ನು ತಮ್ಮ ರಮೇಶ್‌ ಕತ್ತಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿದ್ದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಮಾಜಿ ಸಚಿವ ಉಮೇಶ್‌ ಕತ್ತಿ ದುಂಬಾಲು ಬಿದ್ದಿದ್ದರು. ಅಲ್ಲದೇ ಆ ನಿಟ್ಟಿನಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ಬಂಡಾಯ ಸಭೆಯನ್ನೂ ನಡೆಸಿದ್ದರು. 

LEAVE A REPLY

Please enter your comment!
Please enter your name here