ರಾಜ್ಯದ ಯಾವ ನಗರಗಳಿಗೆ ರೈಲು.. ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಕೊರೋನಾ ಅಟ್ಟಹಾಸದ ನಡುವೆಯೂ ಕೇಂದ್ರ ಸರ್ಕಾರ ಸೀಮಿತ ನಗರಗಳಿಗೆ ರೈಲು ಸಂಚಾರಕ್ಕೆ ನಾಳೆಯಿಂದ ಅವಕಾಶ ನೀಡಿದೆ. ರಾಜ್ಯದ ಕೆಲವು ನಗರಗಳಿಗೆ ಇದರಿಂದ ಅನುಕೂಲ ಆಗುತ್ತಿದೆ.

ರಾಜ್ಯದ ಯಾವ್ಯಾವ ನಗರಗಳಿಗೆ ರೈಲು ಇದೆ ಎನ್ನುವ ಪಟ್ಟಿ ಇಲ್ಲಿದೆ

ಯಾವ್ಯಾವ ನಗರಗಳಿಗೆ ರೈಲು ?
# ದೆಹಲಿ – ಬೆಂಗಳೂರು ನಡುವೆ ಸಂಚರಿಸುವ ರೈಲು ರಾಜ್ಯದ ಇನ್ನೊಂದು ನಗರ ರಾಯಚೂರು ಮೂಲಕ ಸಂಚರಿಸಲಿದೆ.

ಬೆಂಗಳೂರು, ಪುಟ್ಟಪರ್ತಿ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಸೆರಮ್, ಸಿಕಿಂದ್ರಾಬಾದ್, ಕಾಜಿಪೇಟ್, ನಾಗ್ಪುರ, ಇಟರಸಿ, ಭೋಪಾಲ್, ಝಾನ್ಸಿ, ಗ್ವಾಲಿಯಾರ್, ಆಗ್ರಾ ಮೂಲಕ ನವದೆಹಲಿ ತಲುಪಲಿದೆ.

# ದೆಹಲಿ – ತಿರುವನಂಪುರಂ ನಡುವೆ ಸಂಚರಿಸುವ ರೈಲು, ರಾಜ್ಯದ ಮಂಗಳೂರು, ಉಡುಪಿ, ಕಾರವಾರ ನಗರಗಳ ಮೂಲಕ ಹಾದು ಹೋಗಲಿದೆ

ತಿರುವನಂತಪುರಂ, ಕೊಲ್ಲಂ, ಅಲೆಪ್ಪಿ,ಎರ್ನಾಕುಲಂ,ತ್ರಿಶ್ಯೂರ್, ಶೋರನೂರ್, ಕೊಝಿಕ್ಕೋಡ್, ಕಣ್ಣೂರು, ಕಾಸರಗೋಡು, ಮಂಗಳೂರು, ಉಡುಪಿ, ಕಾರವಾರ, ಮಡಗಾಂವ್, ಸಾವಂತವಾಡಿ, ರತ್ನಗಿರಿ,ಪನ್ವೆಲ್, ವಾಸೈ ರೋಡ್, ವಡೋದರಾ, ಕೋಟಾ ಮಾರ್ಗವಾಗಿ ದೆಹಲಿ ತಲುಪಲಿದೆ.

# ಆದರೆ ಚೆನ್ನೈ-ದೆಹಲಿ ನಡುವೆ ಸಂಚರಿಸುವ ರೈಲು ರಾಜ್ಯದ ಯಾವುದೇ ನಗರಗಳನ್ನು ಹಾದು ಹೋಗುವುದಿಲ್ಲ. ಬೆಂಗಳೂರು-ದೆಹಲಿ, ತಿರುವನಂತಪುರಂ-ದೆಹಲಿ ನಡುವೆ ಸಂಚರಿಸುವ ರೈಲುಗಳ ಉಪಯೋಗವನ್ನು ಕರ್ನಾಟಕ ಜನತೆ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here