ರಾಜಸ್ಥಾನದಲ್ಲೂ ಆಪರೇಷನ್‌ ಕಮಲ – ಕಾಂಗ್ರೆಸ್‌ ಶಾಸಕರಿಗೆ 30 ಕೋಟಿ ರೂಪಾಯಿ ಆಮಿಷ..!

ಲಾಕ್‌ಡೌನ್‌ ಹೊತ್ತಲ್ಲಿ ಬಿಜೆಪಿ ಮುಂದಾಳತ್ವದಲ್ಲಿ ಆಪರೇಷನ್‌ ಕಮಲ ಮುಂದುವರಿದಿದ್ದು ರಾಜಸ್ಥಾನಕ್ಕೂ ಕಾಲಿಟ್ಟಿದೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ 25-30 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲದ ಭಾಗವಾಗಿ ಗುಜರಾತ್‌ನಲ್ಲಿ ಈಗಾಗಲೇ 7 ಮಂದಿ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯಲಿದೆ. ಇದರಲ್ಲಿ 2 ಸ್ಥಾನ ಕಾಂಗ್ರೆಸ್‌ಗೂ, 1 ಸ್ಥಾನ ಬಿಜೆಪಿಗೆ ಹೋಗುವುದು ನಿಶ್ಚಿತವಾಗಿದೆ. ಆದರೆ 1 ಸ್ಥಾನ ಗೆಲ್ಲುವುದಷ್ಟೇ ಎಂದು ಖಚಿತವಾಗಿದ್ದರೂ ಬಿಜೆಪಿ ಇಬ್ಬರನ್ನು ಕಣಕ್ಕಿಳಿಸಿದೆ. ಒಬ್ಬರು ರಾಜ್ಯಸಭೆಗೆ ಆಯ್ಕೆ ಅಗಬೇಕಾದರೆ ಕನಿಷ್ಠ 55 ಶಾಸಕರ ಬೆಂಬಲ ಅಗತ್ಯ.

ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿರುವ ರಾಜಸ್ಥಾನ ಕಾಂಗ್ರೆಸ್‌ನ ಮುಖ್ಯ ಸಚೇತಕ ಮಹೇಶ್‌ ಜೋಶಿ ಮಧ್ಯಪ್ರದೇಶ,  ಗುಜರಾತ್‌, ಕರ್ನಾಟಕದಂತೆ ರಾಜಸ್ಥಾನದಲ್ಲೂ ಕಾಂಗ್ರೆಸ್‌ ಶಾಸಕರು ಮತ್ತು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿರುವ ಸ್ವತಂತ್ರ ಶಾಸಕರಿಗೆ ದುಡ್ಡಿನ ಆಮಿಷ ನೀಡಿ ಸರ್ಕಾರವನ್ನು ಬೀಳಿಸುವನ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಮ್ಮ ಶಾಸಕರು ಮತ್ತು ನಮ್ಮನ್ನು ಬೆಂಬಲಿಸುತ್ತಿರುವ ಪಕ್ಷೇತರ ಶಾಸಕರನ್ನು ಹಣದ ಬಲದಲ್ಲಿ ಖರೀಸಲು ಯತ್ನಿಸಲಾಗುತ್ತಿದೆ. ಬಿಜೆಪಿ ಒಬ್ಬೊಬ್ಬ ಶಾಸಕನಿಗೂ 25 ರಿಂದ 30 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದೆ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಗಂಭೀರ ಆರೋಪ ಮಾಡಿದ್ದಾರೆ.

LEAVE A REPLY

Please enter your comment!
Please enter your name here