ಯಶ್ ಬರ್ತ್‌ ಡೇ ಸೆಲೆಬ್ರೇಶನ್‌-‌ ಅತೀ ದೊಡ್ಡ ಸೆಲೆಬ್ರಿಟಿ ಬರ್ತ್ ಡೇ ಕೇಕ್‌

ಸ್ಯಾಂಡಲ್‌ ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಇಂದು ತನ್ನ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ  ಬೆಂಗಳೂರಿನ ನಾಯಂಡಳ್ಳಿ ಸಿಗ್ನಲ್‌ ಬಳಿ ಇರುವ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ಯಶ್‌ ಅಭಿಮಾನಿಗಳು ಅವರ ನೆಚ್ಚಿನ ನಾಯಕನ ಹುಟ್ಟಿದ ಹಬ್ಬದ ಪ್ರಯುಕ್ತ ಸುಮಾರು 5,000 ಕೆ.ಜಿ ತೂಕದ ಕೇಕ್‌ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದರು.

ವರ್ಲ್ಡ್‌ ರೆಕಾರ್ಡ್ಸ್‌ ಇಂಡಿಯಾದಿಂದ ಪ್ರಪಂಚದ ಅತೀ ದೊಡ್ಡ ಸೆಲೆಬ್ರಿಟಿ ಬರ್ತ್ ಡೇ ಕೇಕ್‌ ಎಂಬ ದಾಖಲೆಗೆ ಸೇರಿದ ಬೃಹತ್‌ ಕೇಕ್‌ 

ಪತ್ನಿ ರಾಧಿಕಾ ಪಂಡಿತ್‌ ಸಮೇತರಾಗಿ ಬಂದಿದ್ದ ಯಶ್‌ ನೆರೆದ ಅಭಿಮಾನಿಗಳಿಗೆ  ಕೆಜಿಎಫ್‌ 2 ರ ಡೈಲಾಗ್‌ ಹೇಳುವ ಮೂಲಕ  ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ವ್ಯಕ್ತ ಪಡಿಸಿದರು.

ತಮ್ಮ ಪ್ರೀತಿಯ ನಾಯಕನ ಹುಟ್ಟುಹಬ್ಬವನ್ನು ಆಚರಿಸಲು ನಂದಿ ಲಿಂಕ್‌ ಗ್ರೌಂಡ್‌ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಶುಭಾಶಯಗಳನ್ನು ತಿಳಿಸಿದರು.

‌                                     ಗಮನ ಸೆಳೆದ 216 ಅಡಿ ಎತ್ತರದ ಯಶ್ ಕಟೌಟ್‌ 

LEAVE A REPLY

Please enter your comment!
Please enter your name here