ರಜಿನಿಕಾಂತ್ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ..

ಚೆನ್ನೈನಿಂದ ಮೈಸೂರಿನತ್ತ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿ 48 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕ್ ಆಫ್‍ಗೆ ಮುನ್ನವೇ ತಾಂತ್ರಿಕ ದೋಷವನ್ನು ವಿಮಾನದ ಸಿಬ್ಬಂದಿ ಪತ್ತೆ ಹಚ್ಚಿದರು.

ಕೂಡಲೇ ರಜಿನಿಕಾಂತ್ ಸಹಿತ ಎಲ್ಲರನ್ನು ಕೆಳಗಿಳಿಸಿ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು. ಇದರಿಂದಾಗಿ ರಜಿನಿಕಾಂತ್ ಸುಮಾರು 2 ಗಂಟೆ ಏರ್‍ಪೋರ್ಟ್‍ನಲ್ಲಿಯೇ ಇರುವಂತಾಯಿತು.

ಈ ಸಂದರ್ಭದಲ್ಲಿ ರಜಿನಿಕಾಂತ್ ಅವರೊಂದಿಗೆ ಇತರೆ ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here