ಯುವ ಕಾಂಗ್ರೆಸ್‌ ವತಿಯಿಂದ ನೇತ್ರಾವತಿ ನದಿಗೆ ಹಾರಿ ಜೀವ ರಕ್ಷಿಸಲು ಪ್ರಯತ್ನಿಸಿದ ಸಾಧಕರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಯುವಕನನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ನದಿಗೆ ಹಾರಿದ ನಾಲ್ವರು ಯುವಕರ ಸಾಹಸ – ಮಾನವೀಯತೆಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಪ್ರಕರಣದ ಹಿನ್ನೆಲೆ:

ಮೇ 24 ರಂದು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಎಂಬ ಯುವಕ ಇಲ್ಲಿನ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದರು.

ಈ ವಿಷಯ ತಿಳಿದ ನದಿ ಸಮೀಪದ ನಿವಾಸಿಗಳಾದ ಮುಹಮ್ಮದ್, ಸಮೀರ್,ಝಾಹಿದ್,ತೌಸೀಫ್ ಮತ್ತು ಆರೀಫ್ ಪಿ.ಜೆ ನದಿಗೆ ಧುಮುಕಿ ಯುವಕನನ್ನು ಮೇಲಕ್ಕೆತ್ತಿ ಬದುಕಿಸುವ ಪ್ರಯತ್ನ ಮಾಡಿದ್ದರೂ ಯುವಕ ಕೊನೆಯುಸಿರೆಳೆದಿದ್ದರು.

ನಿಶಾಂತ್‌ನನ್ನು ಉಳಿಸುವುದಕ್ಕಾಗಿ ಆರೀಫ್ ಹೈವೇ ಎಂಬ ಯುವಕ ಆತನ ಬಾಯಿಗೆ ತನ್ನ ಬಾಯಿಯನ್ನು ಇಟ್ಟು ಊದುವ ಮೂಲಕ ಉಸಿರಾಡುವಂತೆ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಯುವಕರ ತಂಡ ಮಾಡಿದ ಅಪಾಯಕಾರಿ ಹಾಗೂ ಮಾನವೀಯತೆಯ ಪ್ರಯತ್ನಕ್ಕೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಕಾರ್ಪೊರೇಟರ್ ಅನಿಲ್ ಕುಮಾರ್, ಪ್ರಶಾಂತ್ ,ಅನ್ಸಾರುದ್ಧಿನ್, ಶುಭೋದ್ ಆಳ್ವ, ಲುಕ್ಮನ್ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ಹೋಗಲಾರದೆ ಮಂಗಳೂರಿನಲ್ಲಿ ಸಿಲುಕಿದ್ದ ಜನರಿಗೆ  ಕೇರಳಕ್ಕೆ ಉಚಿತ ಪ್ರಯಾಣ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡಲಾಯಿತು.

LEAVE A REPLY

Please enter your comment!
Please enter your name here