ಯುವತಿ ಸುಮ್ಮನಿದಿದ್ದು ಯಾಕೆ..? – ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮುಖಂಡನಿಗೆ ಜಾಮೀನು ಕೊಟ್ಟ ಹೈಕೋರ್ಟ್‌ ಪ್ರಶ್ನೆ

ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಉತ್ತರಪ್ರದೇಶದ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ೭೧ ವರ್ಷದ ಚಿನ್ಮಾಯನಂದಗೆ ಜಾಮೀನು ಮಂಜೂರು ಮಾಡಿರುವ ಅಲಹಾಬಾದ್‌ ಹೈಕೋರ್ಟ್‌ ಅತ್ಯಾಚಾರಕ್ಕೊಳಗಾಗಿದ್ದ ೨೩ ವರ್ಷದ ಕಾನೂನು ವಿದ್ಯಾರ್ಥಿನಿಯ ವರ್ತನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಹುಡುಗಿಯೊಬ್ಬಳು ತನ್ನ ಕನ್ಯತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ಆಕೆ ಆಗಲೀ ಆಕೆಯ ಹೆತ್ತವರಾಗಲೀ ಆರೋಪಿತ ಕೃತ್ಯದ ಬಗ್ಗೆ ನ್ಯಾಯಾಲಯದ ಎದುರು ಒಂದೇ ಒಂದು ಮಾತುಗಳನ್ನು ಆಡದೇ ಇರುವುದು ಅಚ್ಚರಿ ಮೂಡಿಸುತ್ತಿದೆ.

ಅರ್ಜಿದಾರರು (ಚಿನ್ಮಾಯನಂದ) ಆರೋಪಿತ ಕೃತ್ಯ ಎಸಗಿದ ಸಂದರ್ಭದಲ್ಲಿ ಆಕೆ ಅರ್ಜಿದಾರರೊಂದಿಗೆ ತನ್ನ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದಾಳೆ ಮತ್ತು ತನ್ನ ಕುಟುಂಬಕ್ಕೆ ಕಾಲೇಜು ಸಿಗುವಂತೆ ನೋಡಿಕೊಂಡಿದ್ದಾಳೆ ಮತ್ತು ಅರ್ಜಿದಾರರಿಂದ ಇತರೆ ಲಾಭಗಳನ್ನು ಪಡೆದುಕೊಂಡಿದ್ದಾಳೆ. ಇದೆಲ್ಲವನ್ನೂ ಗಮನಿಸಿದರೆ ಕೃತ್ಯ ಎಸಗಿದ್ದ ವೇಳೆ ಆಕೆ ತನ್ನ ಪ್ರತಿರೋಧವನ್ನಾಗಲೀ ಅಥವಾ ಪ್ರತಿಭಟನೆಯನ್ನಾಗಲೀ ವ್ಯಕ್ತಪಡಿಸಿಲ್ಲ ಮತ್ತು ಕೃತ್ಯಕ್ಕೂ ಮೊದಲು ಯಾವುದೇ ತೊಂದರೆಯ ಬಗ್ಗೆ ಬಹಿರಂಗಪಡಿಸಿಲ್ಲ.

ಇದು ಕೊಡುಕೊಳ್ಳುವಿಕೆಯ ರೀತಿಯ ಪ್ರಕರಣವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಕ್ಕೆ ಬಂದಿದೆ. ಆದರೆ ಕಾಲಾನಂತರ ಇನ್ನಷ್ಟು ಸುಲಿಗೆ ಮಾಡುವ ಉದ್ದೇಶದಿಂದ ಆಕೆ ತನ್ನವರೊಂದಿಗೆ ಚಿನ್ಮಾಯನಂದ ವಿರುದ್ಧ ಸಂಚು ರೂಪಿಸಿದ್ದಾಳೆ ಮತ್ತು ತನ್ನದೇ ಅಶ್ಲೀಲ ವೀಡಿಯೋಗಳನ್ನು ರೆಕಾರ್ಡ್‌ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾಳೆ ಎಂದು ತೋರುತ್ತದೆ.

ಇಬ್ಬರೂ (ಹುಡುಗಿ ಮತ್ತು ಚಿನ್ಮಾಯನಂದ) ಇಬ್ಬರೂ ತಮ್ಮ ಮಿತಿಗಳನ್ನು ಮೀರಿ ಹೋಗಿದ್ದಾರೆ. ಈ ಹಂತದಲ್ಲಿ ಯಾರು ಯಾರಿಗೆ ಕಿರುಕುಳ ಕೊಟ್ಟರು ಎಂದು ನಿರ್ಧಾರ ಮಾಡುವುದು ಕಷ್ಟವಾಗುತ್ತದೆ

ಎಂದು ನ್ಯಾಯಮೂರ್ತಿ ರಾಹುಲ್‌ ಚರ್ತುವೇದಿ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here