ಯುವತಿಯ ಮೇಲೆ ಆಸಿಡ್‌ ಧಾಳಿ

ಬೈಕ್‌ನಲ್ಲಿ ಬಂದ ಹೆಲ್ಮೆಟ್‌ ಧರಿಸಿದ ವ್ಯಕ್ತಿಯೊಬ್ಬ ಯುವತಿ ಮೇಲೆ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ರಸ್ತೆಯ ಬಸ್‌ ನಿಲ್ದಾಣದ ಬಳಿ ನಡೆದಿದೆ. ಯುವತಿ ಬ್ಯಾಡಗಿಯ ಗಾರ್ಮೆಂಟ್ಸ್‌ನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಸಂಧರ್ಭದಲ್ಲಿ ಈ ಧಾಳಿ ನಡೆದಿದ್ದು, ಯಾತನೆ ತಡೆಯಲಾರದೆ ಯುವತಿ ಕಿರುಚಾಡಿದ್ದಾಳೆ. ರಸ್ತೆ ಬದಿಯ ಬೀದಿ ವ್ಯಾಪಾರಿಗಳು, ಸಾರ್ವಜನಿಕರು ಕೂಡಲೇ ಯುವತಿಯನ್ನು ಹಾವೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸಿಡ್ ಧಾಳಿಯಲ್ಲಿ ಯುವತಿಯ ಮುಖದ ಬಲ ಭಾಗ,ಕತ್ತು ಹಾಗೂ ಬಲಭುಜಕ್ಕೆ ಸುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇತ್ತೀಚೆಗೆ ಹೆಚ್ಚುತ್ತಿರುವ ಆಸಿಡ್‌ ಧಾಳಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಹಲವಾರು ಅಭಿಯಾನಗಳು,ಅರಿವು ಕಾರ್ಯಕ್ರಮಗಳು, ಕಾನೂನುಗಳಿದ್ದರೂ ಪದೇ ಪದೇ ಇಂತಹ ಅಹಿತಕರ ಘಟನೆಗಳು ಹೆಚ್ಚುತ್ತಲೇ ಇದೆ.

LEAVE A REPLY

Please enter your comment!
Please enter your name here