ಯುದ್ಧಭೀತಿ.. ಷೇರುಪೇಟೆಯಲ್ಲಿ ಕರಡಿ ಕುಣಿತ… ಭಾರೀ ನಷ್ಟ

ಅಮೆರಿಕಾ – ಇರಾನ್ ನಡುವೆ ಕವಿದಿರುವ ಯುದ್ಧದ ಕಾರ್ಮೋಡ ಭಾರತ ಸೇರಿದಂತೆ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರಗಳು ಬೆಚ್ಚಿಬೀಳಿಸುವ ಮಟ್ಟಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ಭಾರತದ ಬಿಎಸ್‍ಸಿ,ಎನ್‍ಎಸ್‍ಸಿ ಸೇರಿ ಏಷಿಯಾದ ಮಾರುಕಟ್ಟೆಗಳು ತತ್ತರಿಸಿ ಹೋಗಿವೆ. ಪರಿಣಾಮ ದೇಶಿಯ ಸ್ಟಾಕ್ ಮಾರ್ಕೆಟ್ ದಿನದ ಆರಂಭದಲ್ಲಿಯೇ 350 ಪಾಯಿಂಟ್ ನಷ್ಟ ಹೋಗಿದೆ. ನಿಫ್ಟಿ 100ಕ್ಕೂ ಪಾಟಿಂಗ್ ನಷ್ಟ ಹೊಯಿತು. ಆದರೆ, ತಕ್ಷಣ ಚೇತರಿಸಿಕೊಂಡ ನಿಫ್ಟಿ ಮತ್ತೆ 12ಸಾವಿರ ಪಾಯಿಂಟ್‍ಗಳ ಆಸುಪಾಸಿಗೆ ಬಂದು ನಿಂತಿದೆ. ಸದ್ಯ ಬಿಎಸ್‍ಸಿ ಸೆನ್ಸೆಕ್ಸ್ 150 ಪಾಯಿಂಟ್ ನಷ್ಟದಲ್ಲಿದ್ದು, 40,721 ಪಾಯಿಂಟ್‍ಗಳಲ್ಲಿದೆ. ನಿಫ್ಟಿ 67 ಪಾಯಿಂಟ್‍ ನಷ್ಟ ಹೋಗಿದೆ

ಬ್ಯಾಂಕಿಂಗ್, ಮೆಟಲ್, ಆಟೋ, ಎನರ್ಜಿ ಷೇರುಗಳು ದೊಡ್ಡಮಟ್ಟದಲ್ಲಿ ನಷ್ಟ ಹೋಗುತ್ತಿವೆ. ಇದೇ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ.ನಿನ್ನೆಗೆ ಹೋಲಿಸಿದರೇ ಸ್ವಲ್ಪ ಚೇತರಿಸಿಕೊಂಡಿದ್ದ ರೂಪಾಯಿ ಮೌಲ್ಯ, ಅಮೆರಿಕ ಸೈನಿಕ ಸ್ಥಾವರಗಳ ಮೇಲೆ ಇರಾನ್ ದಾಳಿ ನಡೆಸುತ್ತಲೇ, ಡಾಲರ್ ಎದುರು ರೂಪಾಯಿ ಮತ್ತೆ ಕುಸಿಯಿತು. ಇವತ್ತು 20 ಪೈಸೆ ನಷ್ಟ ಹೊಂದಿದ್ದು, 72 ರೂಪಾಯಿ ಗಡಿ ದಾಟಿದೆ.

ಇದು ಐಟಿ ವಲಯದ ಷೇರುಗಳ ಮೇಲೆ ಪರಿಣಾಮ ಬೀರಿದೆ. ಟಿಸಿಎಸ್, ಆಲ್ಟ್ರಾಟೆಕ್, ಟೆಕ್ ಮಹೀಂದ್ರ, ಬಜಾಜ್ ಆಟೋ, ರಿಲಯಾನ್ಸ್. ಇಂಡಸ್ ಇಂಡ್, ಐಸಿಐಸಿಐ ಲಾಭದ ಹಾದಿಯಲ್ಲಿದ್ರೆ, ಬಿಪಿಸಿಎಲ್, ಲಾರ್ಸೆನ್, ಜೀ, ಐಷರ್ ಮೋಟರ್ಸ್, ಎಸ್‍ಬಿಐ, ಹಿಂಡಾಲ್ಕೋ ಪವರ್ ಗ್ರಿಡ್, ಯುಪಿಸಿಎಲ್ ನಷ್ಟ ಅನುಭವಿಸುತ್ತಿವೆ.

ಯುದ್ಧದ ಕಾರ್ಮೋಡಗಳ ಕಾರಣ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ಬೆಲೆ 70 ಡಾಲರ್ ದಾಟಿದೆ.

LEAVE A REPLY

Please enter your comment!
Please enter your name here