ಯುಗಾದಿ ಹಬ್ಬಕ್ಕೆ ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ಬಿಡುಗಡೆ.

ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರ ನಟನೆಯ ಬಹುನಿರೀಕ್ಷಿತ ಮುಗೀಲ್ ಪೇಟೆ ಚಿತ್ರ ಶೂಟಿಂಗ್ ಮುಕ್ತಾಯಗೊಂಡು ಬಿಡುಗಡೆಗೆ ಸಿದ್ದವಾಗಿದೆ. ಇಂದು ಯುಗಾದಿ ಹಬ್ಬದಂದು ‘ಮುಗಿಲ್ ಪೇಟೆ’ ಚಿತ್ರದ ಎರಡನೇ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಮುಗಿಲ್ ಪೇಟೆ ಚಿತ್ರವು ಕಾಲೇಜು ಲವ್ ಸ್ಟೋರಿ ಚಿತ್ರವಾಗಿದ್ದರೂ ಸಹ ಮನೆ ಹಾಗೂ ತಂದೆ-ತಾಯಿಯ ಪ್ರೀತಿ, ನಂಬಿಕೆಯ ಬಗ್ಗೆ ಕತೆಯನ್ನು ಒಳಗೊಂಡಿರುವಂತಹ ಅಂಶಗಳು ಈ ಟೀಸರ್‌ನಲ್ಲಿ ಕಂಡುಬರುತ್ತವೆ. ಇನ್ನು ಹಾಸ್ಯಪಾತ್ರದಲ್ಲಿ ಸಾಧುಕೋಕಿಲ ಮತ್ತು ರಂಗಾಯಣ ರಘು ನಟಿಸಿದ್ದಾರೆ. ಇವರ ಹಾಸ್ಯದ ಬಗ್ಗೆ ಹೇಳಲೇಬೇಕಿಲ್ಲ.
ಮುಗಿಲ್ ಪೇಟೆ ಚಿತ್ರದ ನಾಯಕ ನಟನಾಗಿ ರವಿಚಂದ್ರನ್ ಅವರ ಪುತ್ರ ಮನುರಂಜನ್ ಅವರು ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ನಾಯಕಿಯಾಗಿ ಕಾಯಡು ಲೋಹರ್ ಅವರು ಸಹ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇವರ ಜೊತೆಗೆ ಪೋಷಕ ಪಾತ್ರದಲ್ಲಿ ತಾರಾ ಅನುರಾಧ, ಅಪ್ಪಣ್ಣ ಹಾಗೂ ಪ್ರಶಾಂತ್ ಸಿದ್ದಿ ಅವರು ನಟಿಸುತ್ತಿದ್ದಾರೆ.
ಮುಗಿಲ್ ಪೇಟೆ ಚಿತ್ರವನ್ನು ರಾಕೇಶ್ ವಿಜಯಕುಮಾರ ಅವರು ಮೋತಿ ಮೂವಿ  ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಭರತ್ ಎಸ್ ನವುಂಡ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀಧರ್ ಎಂ ಸಂಭ್ರಮ್ ಅವರು ಸಂಗೀತ ನೀಡಿದ್ದಾರೆ.

LEAVE A REPLY

Please enter your comment!
Please enter your name here