ಯಾವ ವಯಸ್ಸಿನವರಲ್ಲಿ ಕೊರೋನಾ ರೋಗ ಹೆಚ್ಚು..? ಯಾವ ವಯಸ್ಸಿನವರಲ್ಲಿ ಕೊರೋನಾ ಸಾವು ಹೆಚ್ಚು..?

image courtesy: https://www.nature.com/

ಭಾರತದಲ್ಲಿ ಕೊರೋನಾ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಮತ್ತು ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಮಹಾಮಾರಿ ಕೊರೋನಾ ಜ್ವರಗೆ ಹೆಚ್ಚು ಬಾಧಿತರಾದವರು ಯಾರು..? ಮತ್ತು ಕೊರೋನಾಕ್ಕೆ ಪ್ರಾಣ ಕಳೆದುಕೊಂಡರಲ್ಲಿ ಯಾರು ಅಧಿಕ ಎಂಬ ಅಂಕಿಅಂಶವೂ ಈಗ ಅಧ್ಯಯನ ಆಗುತ್ತಿದೆ.

ಈ ಕ್ಷಣದ ಮಾಹಿತಿ ಪ್ರಕಾರ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ5,345ಕ್ಕೆ ಏರಿದೆ. ಸಾವಿನ ಸಂಖ್ಯೆ 150ರ ಗಡಿ ದಾಟಿ 165ಕ್ಕೆ ಮುಟ್ಟಿದೆ.

ಏಪ್ರಿಲ್‌ 6ರಂದು ಕೇಂದ್ರ ಆರೋಗ್ಯ ಸಚಿವಾಲಯ ಕೊಟ್ಟ ಮಾಹಿತಿಯನ್ನು ಅವಲೋಕಿಸುವುದಾದ್ರೆ 4,067 ಮಂದಿಗಳಲ್ಲಿ ಹೆಚ್ಚಿನವರು 40 ರಿಂದ 60 ವರ್ಷದ ನಡುವಿನವರು.

ಕೊರೋನಾ ಪೀಡಿತರಲ್ಲಿ 40 ವರ್ಷಕ್ಕಿಂತ ಕೆಳಗಿನವರು 1,911. ಒಟ್ಟು ಸಾವಿನಪ್ಪಿದವರಲ್ಲಿ 8 ಮಂದಿ ಈ ವಯಸ್ಸಿನವರೇ. ಮರಣ ಪ್ರಮಾಣ ಶೇಕಡಾ 0.4.

ಇನ್ನು 40 ರಿಂದ 60 ವರ್ಷದ ನಡುವಿನ ಕೊರೋನಾ ರೋಗಿಗಳ ಸಂಖ್ಯೆ 1,383. ಇವರಲ್ಲಿ ಮೃತಪಟ್ಟವರು 33 ಮಂದಿ. ಮರಣ ಪ್ರಮಾಣ ಶೇಕಡಾ 2.4.

60 ವರ್ಷಕ್ಕಿಂತ ಮೇಲ್ಪಟ್ಟ ಕೊರೋನಾ ರೋಗಿಗಳ ಸಂಖ್ಯೆ 773, ಇವರಲ್ಲಿ ಮೃತಪಟ್ಟವರು 89 ಮಂದಿ. ಮರಣ ಪ್ರಮಾಣ ಶೇಕಡಾ 8.9.

ಇನ್ನು ಕೊರೋನಾ ಪೀಡಿತರಲ್ಲಿ ಪುರುಷರ ಸಂಖ್ಯೆ 3,091. ಇವರಲ್ಲಿ ಕೊರೋನಾಗೆ ಬಲಿ ಆದವರು 80 ಮಂದಿ. ಮರಣ ಪ್ರಮಾಣ ಶೇಕಡಾ 2.6. ಮಹಿಳಾ ಕೊರೋನಾ ರೋಗಿಗಳ ಸಂಖ್ಯೆ 976. ಇವರಲ್ಲಿ ಕೊರೋನಾಗೆ ಸತ್ತವರು 26. ಮರಣ ಪ್ರಮಾಣ 3.0.

ಅಂದರೆ ಭಾರತದಲ್ಲಿ ಪ್ರತಿ 100 ಕೊರೋನಾಗೆ ಸತ್ತವರ ಸಂಖ್ಯೆ 2.7.

LEAVE A REPLY

Please enter your comment!
Please enter your name here