ಯಾವುದಾದರೂ ರೈಲಿಗೆ ಪಂಪನ ಹೆಸರನ್ನೂ ಇಡಲಿ

ಸರಕಾರಗಳು ತನ್ನ ತನ್ನ ಆಡಳಿತದ ಅವಧಿಯಲ್ಲಿ ಹೆಸರು ಇಡುವುದು ಅಥವಾ ಬದಲಾವಣೆ ಮಾಡುವುದು ಸಹಜ. ತಮಗೆ ಇಷ್ಟ ಆದವರ ಹೆಸರುಗಳನ್ನು ಇಡುತ್ತದೆ , ಇದೇನೂ ಹೊಸದಲ್ಲ.

ಹಾಗೆಯೇ ಇನ್ನು ಮುಂದೆ ಸಾಧಕರ ಹೆಸರುಗಳನ್ನು ಪರಿಗಣಿಸುವಾಗ ಆದಿ ಕವಿ , ಕವಿ ಚಕ್ರವರ್ತಿ ಪಂಪನ (ADI KAVI PAMPA) ಹೆಸರನ್ನು ಇಡಬೇಕಾಗಿ ವಿನಂತಿ. ಸರಕಾರಗಳು ಪಂಪನ ಹೆಸರನ್ನು ಯಾವುದಕ್ಕೂ ಇಟ್ಟಿರುವ ಮಾಹಿತಿ ನನಗೆ ತಿಳಿದ ಹಾಗೆ ಇಲ್ಲ ಅನಿಸುತ್ತೆ.‌

ರೈಲಿಗೆ ಹೆಸರು ಇಡುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಎಲ್ಲರೂ ಸಾಧಕರೇ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಇಲ್ಲಿ ಕರ್ನಾಟಕದ ಯಾವುದಾದರೂ ರೈಲಿಗೆ ಪಂಪನ ಹೆಸರನ್ನು ನಾಮಕರಣ ಮಾಡಬೇಕು, ಯಾಕೆಂದರೆ ಪಂಪ ಕನ್ನಡದ ಹಿರಿಮೆ ಗರಿಮೆಯ ಪ್ರತೀಕ. ಆತನ ಕನ್ನಡದ ಕೃಷಿ ಇಂದಿಗೂ ಅಜರಾಮರ. “ಮಾನವ ಕುಲ ತಾನೊಂದೇ ವಲಂ” ಎಂದು ಸಾರಿದವನು ಪಂಪ. ಇಂತಹಾ ಕವಿವರೇಣ್ಯನನ್ನು ಕಡೆಗಣಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಕೂಡ ಪಂಪನ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕದ ಯಾವುದಾದರೂ ರೈಲಿಗೆ ನಾಮಕರಣಗೊಳಿಸುವಂತೆ ಶಿಫಾರಸು ಮಾಡಬೇಕಾಗಿ ವಿನಂತಿಸುತ್ತೇನೆ. ಕನ್ನಡ ಸಂಘಟನೆಗಳು, ಹೋರಾಟಗಾರರು, ಸಾಹಿತಿಗಳು, ಕನ್ನಡದ ಅಭಿಮಾನಿಗಳು ಅನುಮೋದನೆಗೆ ಕೈ ಜೋಡಿಸಲಿ. ಸುಮ್ಮನೆ ರಾಜಕೀಯ ಮಾಡುವುದಕ್ಕಿಂತ ಒಂದು ಉತ್ತಮ ಕಾರ್ಯ ನಡೆಯುವಂತಾಗಲಿ. ಪಂಪ ಸರ್ವರ ಪ್ರೀತಿಯ ಕವಿ.‌ ಕರ್ನಾಟಕದಲ್ಲಿ ಕನ್ನಡತನ ಮೇಳೈಸಲಿ.

ನಿರಂಜನ್ ಜೈನ್ ಕುದ್ಯಾಡಿ

LEAVE A REPLY

Please enter your comment!
Please enter your name here