ಯಾರು ಈ ಕೆಂಪು ಟೆರರ್ ಹಿಡ್ಮಾ..

ಛತ್ತೀಸ್‌ಘಡದ ಬಿಜಾಪುರ್ ಮತ್ತು ಸುಕ್ಮಾದಲ್ಲಿ ಹರಿದ ಯೋಧರ ನೆತ್ತರ ಹಿಂದೆ ಕೇಳಿ ಬರ್ತಿರೋ ಪ್ರಮುಖ ಹೆಸರು ಹಿಡ್ಮಾ.. ಅಸಲಿಗೆ ಹಿಡ್ಮಾ ಯಾರು..? ಆತನ ಹಿನ್ನೆಲೆ ಏನು..? ಸರ್ಕಾರ ಹೇಳುವಂತೆ ನಿಜಕ್ಕೂ ಆತನ ರಣರಕ್ಕಸನಾ..? ಎಂಬುದನ್ನು ವಿವರಿಸ್ತೀವಿ ನೋಡಿ..
ವಯಸ್ಸು ಸುಮಾರು 40.. ನೋಡಲು ಸಣಕಲು ದೇಹ.. ಸೌಮ್ಯ ಸ್ವಭಾವಿ.. ಮೃದು ಭಾಷಿ.. ನೋಡಿದ್ರೆ ಈತ ರಣ ರಕ್ಕಸ ಅಂತ ಅನ್ನಿಸಲ್ಲ.. ಯೋಧರ ಮೇಲೆ ದಾಳಿಗೆ ರಣತಂತ್ರ ರೂಪಿಸ್ತಾನಾ..? ಅನ್ನೋದು ಡೌಟ್ ಅಂತಾರೆ ಹಿಡ್ಮಾನನ್ನು ನೋಡಿದವರು.. ಆದರೆ, ಕಳೆದೊಂದು ದಶಕದಲ್ಲಿ ಛತ್ತೀಸ್‌ಘಡದ ದಂಡಕಾರಣ್ಯದಲ್ಲಿ ಹರಿದ ನೂರಾರು ಯೋಧರ ರಕ್ತದ ಕೋಡಿಯ ಹಿಂದೆ ಇರೋದು ಈತನೇ ಅಂತಾ ದಾಖಲೆಗಳು ಹೇಳುತ್ತವೆ.

ಅಸಲಿಗೆ, ಮಾವೋಯಿಸ್ಟ್ ಪಾರ್ಟಿಯಲ್ಲಿ ಹಿಡ್ಮಾ ಬೆಳೆದುಬಂದ ರೀತಿಯೇ ರೋಚಕವಾಗಿದೆ. 1996-97ರ ಸಮಯದಲ್ಲಿ ತನ್ನ 17ನೇ ವಯಸ್ಸಿನಲ್ಲಿ ನಕ್ಸಲ್ ಚಳವಳಿಯಲ್ಲಿ ಮಡಾವಿ ಹಿಡ್ಮಾ ಗುರುತಿಸಿಕೊಂಡರು. ಆತನಿಗೆ ಹಿಡ್ಮಲ್ಲು, ಸಂತೋಷ್ ಎನ್ನುವ ಹೆಸರುಗಳೂ ಇವೆ.

ದಕ್ಷಿಣ ಬಸ್ತಾರ್ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಪುವರ್ತಿ ಎಂಬುದು ಹಿಡ್ಮಾ ಹುಟ್ಟಿದೂರು.. ಈ ಊರಲ್ಲೇ ಹೆಚ್ಚುಕಮ್ಮಿ 40ರಿಂದ 50 ಮಂದಿ ಮಾವೋಗಳಿದ್ದಾರೆ ಎಂಬುದು ಒಂದು ಅಂದಾಜು. ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಳ್ಳುವುದಿಕ್ಕಿಂತ ಮೊದಲು ಹಿಡ್ಮಾ ಬೇಸಾಯ ಮಾಡ್ತಿದ್ದ.. ಈಗ ಅನ್ಯಾಯ ಎದುರಿಸ್ತೀನಿ.. ತಪ್ಪು ಮಾಡಿದೋರಿಗೆ ಪಾಠ ಕಲಿಸ್ತೀನಿ ಎನ್ನುತ್ತಾ ನಕ್ಸಲ್ ಬೇಸಾಯ ಮಾಡ್ತಿದ್ದಾನೆ ಈ ಹಿಡ್ಮಾ.

ಹೆಚ್ಚು ಮಾತಾಡೋ ಅಭ್ಯಾಸ ಹೊಂದಿಲ್ಲದ ಹಿಡ್ಮಾ ಓದಿದ್ದು 7ನೇ ಕ್ಲಾಸು.. ಆದ್ರೆ, ಹೊಸ ಹೊಸ ವಿಚಾರ ತಿಳಿದುಕೊಳ್ಳಲು ಸದಾ ಆಸಕ್ತ.. ಮಾವೋ ಚಳವಳಿಯಲ್ಲಿದ್ದ ಇಂಗ್ಲೀಷ್ ಲೆಕ್ಚರರ್ ಒಬ್ಬರಿಂದ ಆಂಗ್ಲಭಾಷೆಯನ್ನು ಕೂಡ ಕಲಿತು ಕರಗತ ಮಾಡಿಕೊಂಡಿದ್ದ.. ತನ್ನ ಮಾತೃಭಾಷೆ ಅಲ್ಲದ ಹಿಂದಿಯನ್ನು ಕೂಡ ಕರಗತ ಮಾಡಿಕೊಂಡಿದ್ದ

ಮೊದಲಿಗೆ ಮಾವೋವಾದಿಗಳಿಗೆ ಆಯುಧ ತಯಾರಿಸಿ ಕೊಡುವ ವಿಭಾಗದಲ್ಲಿ ಹಿಡ್ಮಾನನ್ನು ನಿಯೋಜಿಸಲಾಗಿತ್ತು. ಆಯುಧಗಳ ತಯಾರಿ, ರಿಪೇರಿ ಮಾಡ್ತಿದ್ದ ಹಿಡ್ಮಾ, ನಂತರ ಗ್ರೆನೆಡ್, ರಾಕೆಟ್ ಲಾಂಚರ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಮಟ್ಟಕ್ಕೆ ಬೆಳೆದ.. ನಂತರ ಹಿಡ್ಮಾನನ್ನು ಗೆರಿಲ್ಲಾ ಟೀಂಗೆ ಶಿಫ್ಟ್ ಮಾಡಲಾಯ್ತು. ಆಗ್ಲೇ ಛತ್ತೀಸ್‌ಘಡದಲ್ಲಿ ಸಾಲ್ವಾಜುಡಂ ಹುಟ್ಟು ಪಡೆದಿತ್ತು. ಬಸ್ತಾರ್‌ನಲ್ಲಿ ಸಾಲ್ವಜುಡಂ ವಿರುದ್ಧದ ಹೋರಾಟ ಹಿಡ್ಮಾನನ್ನು ಸಂಘಟನೆಯಲ್ಲಿ ಎಲ್ಲೋ ಕೊಂಡೊಯ್ಯಿತು. 90ರ ಮಧ್ಯಭಾಗದಲ್ಲಿ ಹಿನ್ನೆಡೆ ಕಂಡಿದ್ದ ನಕ್ಸಲರಿಗೆ ಸಾಲ್ವಜುಡಂ ವರವಾಗಿ ಪರಿಣಮಿಸಿತ್ತು. ತಮ್ಮವರ ಮೇಲೆ ಉಳ್ಳವರು ನಡೆಸ್ತಿದ್ದ ದೌರ್ಜನ್ಯ ಹಿಡ್ಮಾನನ್ನು ಕಲ್ಲಾಗಿಸಿತ್ತು.. ರಣರಕ್ಕಸನನ್ನಾಗಿ ಬದಲಾಯಿಸಿತ್ತು.

2007ರ ಮಾರ್ಚ್ನಲ್ಲಿ ಉರ್ಪಲ್ ಮೆಟ್ಟ ಎಂಬಲ್ಲಿ ಸಿಆರ್‌ಪಿಎಫ್ ಮೇಲೆ ದಾಳಿ – 24 ಸಿಆರ್‌ಪಿಎಫ್ ಯೋಧರು ಬಲಿ
ಈ ದಾಳಿಯ ನಾಯಕತ್ವ ವಹಿಸಿದ್ದು ಇದೇ ಹಿಡ್ಮಾ.. ಈ ದಾಳಿಗೆ ಒಂದು ಪ್ರತ್ಯೇಕತೆ ಇದೆ. ಇದಕ್ಕೂ ಮೊದಲು ನಕ್ಸಲರು ನೆಲಬಾಂಬ್ ಸ್ಫೋಟಗಳನ್ನೇ ಹೆಚ್ಚು ಆಧರಿಸಿದ್ದರು. ಆದರೆ, ನಕ್ಸಲರು ಮೊದಲ ಬಾರಿಗೆ ಬಂದೂಕು ಹಿಡಿದು ಎದಿರು-ಬದಿರು ಯುದ್ಧಕ್ಕೆ ಇಳಿದ ಮೊದಲ ಘಟನೆ ಇದು ಎನ್ನುತ್ತಾರೆ. ಈ ತಂತ್ರದ ಹಿಂದೆ ಇದ್ದಿದ್ದು ಮತ್ತದೇ ಹಿಡ್ಮಾ.. ಇದಾದ ಬೆನ್ನಲ್ಲೇ ಫಸ್ಟ್ ಬೆಟಾಲಿಯನ್ ಕಮಾಂಡರ್ ಆಗಿ ಹಿಡ್ಮಾನನ್ನು ಸಂಘಟನೆ ನೇಮಿಸಿತ್ತು. ಮುಂದೆ ಸ್ಪೆಷಲ್ ಜೋನಲ್ ಸಮಿತಿ ಸದಸ್ಯನಾಗಿ ನೇಮಕಗೊಂಡ್ರು.
2010ರ ಏಪ್ರಿಲ್ ತಿಂಗಳಲ್ಲಿ ತಾಡಿಮೆಟ್ಲ ಬಳಿ ನಡೆಸಿದ ನಕ್ಸಲ್ ದಾಳಿಯಲ್ಲಿ 76 ಪೊಲೀಸರು ಹುತಾತ್ಮರಾಗಿದ್ದರು. 2017ರ ಮಾರ್ಚ್ನಲ್ಲಿ 12 ಸಿಆರ್‌ಪಿಎಫ್ ಯೋಧರು ನಕ್ಸಲ್ ದಾಳಿಗೆ ಬಲಿ ಆದರು.ಈ ಎರಡು ದಾಳಿಯ ಹಿಂದೆ ಇದ್ದಿದ್ದು ಇದೇ ಹಿಡ್ಮಾ ಅಂತಾರೆ.

ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಹಿಡ್ಮಾ ತುಪಾಕಿ ಹಿಡಿದು ದಾಳಿ ನಡೆಸೋದು ತುಂಬಾನೆ ಕಡಿಮೆ ಅಂತೆ.. ಹಾಗಂತಾ ಯುದ್ಧಭೂಮಿಗೆ ಹಿಡ್ಮಾ ಬೆನ್ನು ತಿರುಗಿಸಲ್ಲ.. ಏನಿದ್ದರೂ ತಮ್ಮ ತಂಡಕ್ಕೆ ಸೂಚನೆ ಕೊಡುತ್ತಾ, ದಾಳಿಯ ಮುಂದಾಳತ್ವವನ್ನು ವಹಿಸುತ್ತಾರಂತೆ. ತುಂಬಾ ಅಗತ್ಯಬೀಳದ ಹೊರತು ಹಿಡ್ಮಾ ಅಸ್ತ್ರ ಬಳಸಲ್ವಂತೆ.. ಇನ್ನೂ ವಿಚಿತ್ರ ಏನು ಗೊತ್ತಾ, 2012ರವರೆಗೂ ಹಿಡ್ಮಾಗೆ ಒಂದೇ ಒಂದು ಚಿಕ್ಕ ಗಾಯ ಕೂಡ ಆಗಿರಲಿಲ್ಲ.. ಸಾವಿರಾರು ಬುಲೆಟ್‌ಗಳ ಜೊತೆ ಇದ್ದುಕೊಂಡು ಹೋರಾಟ ನಡೆಸಿದ್ರೂ ಹಿಡ್ಮಾಗೆ ಒಂದು ಗಾಯವೂ ಆಗಿರಲಿಲ್ಲ ಅನ್ನೋದು ವಿಚಿತ್ರವೇ ಸರಿ.. ಜೊತೆಗೆ ಮೂರು ಬಾರಿ ಹಿಡ್ಮಾ ಬಲಿಯಾದ ಎಂದು ಸುದ್ದಿ ಹಬ್ಬಿತ್ತು. ಅಷ್ಟೇ..

ಹಿಡ್ಮಾ ಅಂದ್ರೆ ಲೋಕಲ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್
ಹಿಡ್ಮಾ ಬಸ್ತಾರ್‌ನವರು.. ಅಲ್ಲಿನ ಬುಡಕಟ್ಟು ಸಮುದಾಯದ ವ್ಯಕ್ತಿ.. ಸ್ಥಳೀಯರೊಂದಿಗೆ ಹೆಚ್ಚು ಬೆರೀತಾನೆ.. ಲೋಕಲ್‌ಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಹೀಗಾಗಿ ಹಿಡ್ಮಾ ಅಂದ್ರೆ ಸ್ಥಳೀಯ ಯುವಕರಿಗೆ ಸಿಕ್ಕಾಪಟ್ಟೆ ಕ್ರೇಜ್ ಅಂತೆ. ಅಲ್ಲಿಯ ಜನ ಹಿಡ್ಮಾನನ್ನು ದೇವರಂತೆ ನೋಡ್ತಾರಂತೆ.. ಹಿಡ್ಮಾ ಬಸ್ತಾರ್‌ನ ದಂಡಕಾರಣ್ಯ ಬಿಟ್ಟು ಬೇರೆಕಡೆ ಹೋಗಿಲ್ಲ.. ಪ್ರಮುಖ ರಸ್ತೆಯಲ್ಲಿ ಹಿಡ್ಮಾ ಎಂದಿಗೂ ಕಾಣಿಸಿಕೊಂಡಿಲ್ಲವAತೆ. ಸದ್ಯ ಹಿಡ್ಮಾ ತಲೆಗೆ 35 ಲಕ್ಷ ರೂಪಾಯಿಗಳ ರಿವಾರ್ಡ್ ಇದೆ.

 

LEAVE A REPLY

Please enter your comment!
Please enter your name here