ಯಾಮಿ ಗೌತಮ್ ಮತ್ತು ಕರೀನಾ ಕಪೂರ್ ಹುಟ್ಟುಹಾಕಿದ್ದಾರಂತೆ ಹೊಸ ಟ್ರೆಂಡ್ ಅಬ್ಬಬ್ಬಾ…!

ಸತ್ಯಸಾಕ್ಷಿ ತುಮರಿ-

ಡ್ರೆಸ್ ಬಗ್ಗೆ ಯಾರಿಗೆ ತಾನೇ ಕಾಳಜಿ ಇಲ್ಲ? ಪ್ರತಿಯೊಬ್ಬರೂ ತಮಗೆ ಒಪ್ಪುವ ಬಟ್ಟೆ ತೊಟ್ಟು ಎಲ್ಲರೆದುರು ಗುರುತಿಸಿಕೊಳ್ಳಲು ಹವಣಿಸುತ್ತಿರುತ್ತಾರೆ.

ಸಾಮಾನ್ಯ ಜನರು ಇದ್ದದ್ದರಲ್ಲಿ ತಮಗೊಪ್ಪುವಂತೆ ಬಟ್ಟೆ ಧರಿಸಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ಸೆಲೆಬ್ರಿಟಿಗಳಾದರೆ ಯಾವ ಬಟ್ಟೆ ಧರಿಸಿದರೂ ಅದು ನೋಡುಗರಿಗೆ ಕಣ್ಣು ಕುಕ್ಕಿಸಿಬಿಡುತ್ತದೆ.

ಇತ್ತೀಚೆಗೆ ನಡೆದ ಜವಾನಿ ಜಾನೇಮನ್ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿಯರಾದ ಯಾಮಿ ಗೌತಮ್ ಮತ್ತು ಕರೀನಾ ಕಪೂರ್ ಧರಿಸಿದ್ದ ಬಟ್ಟೆಗಳು ಉಡುಪು ಪ್ರಿಯರ ಹೊಸ ಟ್ರೆಂಡ್ ಆಗಿ ಬದಲಾಗಿದೆ.

ಸಾಮಾನ್ಯವಾಗಿ ಪ್ಯಾಂಟ್ ಮತ್ತು ಶರ್ಟ್ ಧರಿಸುವಾಗ ಬೇರೆ ಬೇರೆ ಬಣ್ಣವನ್ನು ಒಂದಕ್ಕೊಂದು ಹೊಂದಿಸಿ ಧರಿಸುವುದು ಸಾಮಾನ್ಯ. ಆದರೆ ಯಾಮಿ ಮತ್ತು ಕರೀನಾ ಒಂದೇ ಬಣ್ಣದ ಪ್ಯಾಂಟ್ ಮತ್ತು ಟಾಪ್ ಧರಿಸಿದ್ದು ನೋಡುಗರಿಗೆ ಹೊಸತು ಎನ್ನಿಸಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾಮಿ ನೇರಳೆ ಬಣ್ಣದ ಪ್ಯಾಂಟ್ ಗೆ ನೇರಳೇ ಬಣ್ಣದ ಹೈ-ನೆಕ್ ಸ್ವೆಟರ್ ಧರಿಸಿ ಮುದ್ದಾಗಿ ಕಾಣಿಸಿದರೆ ಕರೀನಾ ಗುಲಾಬಿ ಬಣ್ಣದ ಪ್ಯಾಂಟ್ ಮತ್ತು ಗುಲಾಬಿ ಬಣ್ಣದ ಶರ್ಟ್ ಧರಿಸಿ ಅಭಿಮಾನಿಗಳ ಎದುರು ಕಾಣಿಸಿಕೊಂಡರು.

ಈ ಇಬ್ಬರು ನಟಿಯರು ಸೃಷ್ಟಿಸಿದ ಈ ಟ್ರೆಂಡ್ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ

 

LEAVE A REPLY

Please enter your comment!
Please enter your name here