ಯಾದಗಿರಿ: ಪ್ರವಾಹದಿಂದ ಬೀದಿಗೆ ಬಂದ ಮೀನುಗಾರರ ಬದುಕು

ಯಾದಗಿರಿ: ಬಸವಸಾಗರ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಯಾದಗಿರಿಯಲ್ಲಿ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ, ಮೀನುಗಾರರ ಗುಡಿಸಲುಗಳು ಸಂಪೂರ್ಣ ಮುಳುಗಡೆಯಾಗಿದ್ದು,ವಡಗೇರಾ ತಾಲೂಕಿನ ಕದರಾಪುರ ಗ್ರಾಮದ ಸುಮಾರು 38ಕ್ಕೂ ಅಧಿಕ ಮೀನುಗಾರರ ಗುಡಿಸಲುಗಳಿಗೆ ನೀರು ನುಗ್ಗಿದೆ.

ಗುಡಿಸಲು ಕಳೆದುಕೊಂಡ ಮೀನುಗಾರರು ಕಂಗಾಲಾಗಿದ್ದು, ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4.6 ಲಕ್ಷದ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆ, ಕದರಾಪುರ, ಬೆಂಡೆಗಂಬಳಿ, ಗೋನಾಲ, ಶಿವಪುರ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಅಪಾರ ಮಟ್ಟ ನೀರು ಹರಿದು ಬಂದ ಹಿನ್ನಲೆ ಸುಮಾರು ಐದು ನೂರು ಹೆಕ್ಟರ್ ಭತ್ತ ಹಾಗೂ ಹತ್ತಿ ಬೆಳೆ ನೀರು ಪಾಲಾಗಿದ್ದು, ಸಾಲ ಸೂಲ ಮಾಡಿ ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ.

ಇನ್ನು ಸ್ಥಳೀಯರು ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಏಕಾಏಕಿ ನೀರು ಬಿಟ್ಟ ಕಾರಣ ಅಸಮಾಧನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here