ಯಡಿಯೂರಪ್ಪ ಸರ್ಕಾರದಿಂದ ಮತ್ತೆ ಗೊಂದಲ- ಮತ್ತೆ ಲಾಕ್‌ಡೌನ್‌ ವಿನಾಯ್ತಿ, ಯಾವುದಕ್ಕೆಲ್ಲ..?

ಸಾರ್ವಜನಿಕರ ಒತ್ತಡಕ್ಕೆ ಮಣಿದು ಏಪ್ರಿಲ್‌ 20ರಿಂದ ನೀಡಲಾಗಿದ್ದ ಲಾಕ್‌ಡೌನ್‌ ವಿನಾಯ್ತಿಯನ್ನು ವಾಪಸ್‌ ಪಡೆದಿದ್ದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಈಗ ಮತ್ತೆ ಲಾಕ್‌ಡೌನ್‌ ವಿನಾಯ್ತಿ ಘೋಷಿಸಿ ಅಚ್ಚರಿ ಮೂಡಿಸಿದೆ. ಕಂಟೈನ್‌ಮೆಂಟ್‌ ಝೋನ್‌ನಗಳ ಹೊರಗೆ ಏಪ್ರಿಲ್‌ 23ರಿಂದ ಈ ವಿನಾಯ್ತಿ ಲಭ್ಯವಾಗಲಿದೆ.

1) ಐಟಿ ಕಂಪನಿಗಳಿಗೆ ಕನಿಷ್ಠ ನೌಕರರೊಂದಿಗೆ ಕಂಪನಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

2) ಕೋರಿಯರ್‌ ಸೇವೆಗಳು

3) ಇಂಡಸ್ಟ್ರೀಯಲ್‌ ಎಸ್ಟೇಟ್‌ನಲ್ಲಿರುವ ಕೈಗಾರಿಕೆಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು

4) ಎಲ್ಲ ಸ್ವರೂಪದ ಕೈಗಾರಿಕಾ ಯೋಜನೆಗಳು

5 ರಸ್ತೆ, ನೀರಾವರಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳು

6) ಎಲೆಕ್ಟ್ರಿಷಿಯನ್‌, ಕಂಪ್ಯೂಟರ್‌ ರಿಪೇರಿ, ಪ್ಲಂಬರ್‌, ಆಟೋ ಮೆಕಾನಿಕ್ಸ್‌ (ಗ್ಯಾರೇಜ್‌), ಕಾರ್ಪೆಂಟರ್ಸ್‌

7) ಔಷಧ, ಔಷಧ ಉಪಕರಣಗಳು, ಔಷದೋತ್ಪನ್ನಗಳ ಕಚ್ಚಾ ವಸ್ತುಗಳ ತಯಾರಿಕೆ ಮತ್ತು ಪೊರೈಕೆ

8) ಪ್ಯಾಕೇಜಿಂಗ್‌ ಕಂಪನಿಗಳು, ಆಹಾರ ಸಂಸ್ಕರಣಾ ಘಟಕಗಳು

ನಾಳೆಯಿಂದಲೇ ಕೊರೋನಾ ಹಾಟ್‌ಸ್ಪಾಟ್‌ ಅಲ್ಲದ ಕಡೆಗಳಲ್ಲಿ ಈ ವಿನಾಯ್ತಿ ಲಭ್ಯವಾಗಲಿದೆ.

ಆದರೆ ವಿನಾಯ್ತಿ ನೀಡಿರುವ ರಾಜ್ಯ ಸರ್ಕಾರ ಕೆಲವೊಂದಿಷ್ಟು ಷರತ್ತುಗಳನ್ನು ಹಾಕಿದೆ

1) ಕಾಮಗಾರಿಗಳಿಗೆ ಬೇರೆ ಕಡೆಯಿಂದ ಕಾರ್ಮಿಕರನ್ನು ಬಳಸುವಂತಿಲ್ಲ. ಕೆಲಸದ ಸ್ಥಳದಲ್ಲಿರುವ ಕಾರ್ಮಿಕರನ್ನಷ್ಟೇ ಬಳಸಿಕೊಳ್ಳಬೇಕು.

2) ತುರ್ತುಸೇವೆ ಪಾಸ್‌ ಹೊಂದಿರುವ ಇರುವ ಖಾಸಗಿ ಬಸ್‌ಗಳು ಓಡಾಡಬಹುದು

3) ಕೆಲಸ ಸ್ಥಳಗಳಿಗೆ ನೌಕರರು ಪಾಸ್‌ಗಳೊಂದಿಗೆ ಓಡಾಡಬಹುದಾಗಿದೆ.

LEAVE A REPLY

Please enter your comment!
Please enter your name here