BIG EXCLUSIVE: ಯಡಿಯೂರಪ್ಪ ಸರ್ಕಾರದಲ್ಲಿ ಕೊರೋನಾ ಹಗರಣ – ಪಿಪಿಇ ಕಿಟ್‌, ವೆಂಟಿಲೇಟರ್‌ ಖರೀದಿಯಲ್ಲಿ ಲೂಟಿ, ದೂರು

ಒಂದ್ಕಡೆ ಕೊರೋನಾದಿಂದ ಲಾಕ್‌ಡೌನ್‌ ಹೇರಿಕೆ ಆಗಿ ರಾಜ್ಯದ ಬೊಕ್ಕಸಕ್ಕೆ ಖಾಲಿ ಆಗಿದ್ದರೆ ಅತ್ತ ಕೊರೋನಾ ಸಂಕಷ್ಟವನ್ನೇ ಬಳಸಿಕೊಂಡು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದಲ್ಲಿ ಕೊರೋನಾ ನಿರ್ವಹಣೆಯ ವೇಳೆ ಅಕ್ರಮ ಎಸಗಲಾಗಿರುವ ಬಗ್ಗೆ ಅಕ್ರಮ ಸಂಬಂಧ ಸದನ ಸಮಿತಿಗೂ ದೂರುಗಳನ್ನು ನೀಡಲಾಗಿದೆ.

ಆರೋಪಗಳು:

ಕರ್ನಾಟಕ ಔಷಧ ಮತ್ತು ಸಾಗಾಟ ಸಂಸ್ಥೆಯಲ್ಲಿ ಕೊರೋನಾ ವೈರಸ್‌ ಸಂಬಂಧಿತ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಶಾಸಕರೇ ಇರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ದೂರುಗಳು ಸಲ್ಲಿಕೆ ಆಗಿವೆ.

ವೈದ್ಯಕೀಯ ಉಪಕರಣಗಳ ಖರೀದಿಗೆ ನೀಡಲಾಗಿರುವ ವಿನಾಯ್ತಿಯನ್ನು ದೂರುಪಡಿಸಿಕೊಂಡು ಸಂಸ್ಥೆಯ ಅಧಿಕಾರಿಗಳು ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದ್ದು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ.

1) ಪಿಪಿಇ ಕಿಟ್‌ ಖರೀದಿ ಅಕ್ರಮ: ಮಹಾರಾಷ್ಟ್ರ ಮೂಲದ ಅಮರಾವತಿಯ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಮೂಲಕ ಖರೀದಿಸಿರುವ ಪಿಪಿಇ ಕಿಟ್‌ಗಳು ಕಳಪೆ ಗುಣಮಟ್ಟದಾಗಿದೆ. ಆದರೂ 2 ಬಾರಿ ಇದೇ ಕಂಪನಿಯಿಂದ ಪಿಪಿಇ ಕಿಟ್‌ ಖರೀದಿಸಲಾಗಿದೆ. ಎರಡು ಬಾರಿ ಖರೀದಿಯ ವೇಳೆ ದರಗಳಲ್ಲಿ ಭಾರೀ ಪ್ರಮಾಣದ ಏರಿಕೆ ಮಾಡಲಾಗಿದೆ.

2) ಕೊರೋನಾ ಪರೀಕ್ಷಾ ಕಿಟ್‌ ಖರೀದಿ ಹಗರಣ: ರಾಜಸ್ಥಾನ ಸರ್ಕಾರವು ಚೀನಾದ 2 ಕಂಪನಿಗಳಿಂದ ಖರೀದಿ ಮಾಡಿ ಬಳಕೆಗೆ ಯೋಗ್ಯವಲ್ಲವೆಂದು ನಿರ್ಧರಿಸಿದ ಮೇಲೆ ಅದೇ ಚೀನಾ ಕಂಪನಿಯಿಂದ ಪರೀಕ್ಷಾ ಕಿಟ್‌ಗಳನ್ನು ರಾಜ್ಯ ಸರ್ಕಾರಕ್ಕೆ ಖರೀದಿಸಿದೆ. ಆದರೆ ಬಳಿಕ ಈ ಕಿಟ್‌ಗಳು ಕಳಪೆ ಗುಣಮಟ್ಟವೆಂದು ಬಳಕೆಯನ್ನು ನಿಲ್ಲಿಸಿದೆ.

3) ಬಳಕೆ ಮಾಡಲಾದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂಪಾಯಿ ಪಾವತಿ ಮಾಡಲಾಗಿದೆ. ದೆಹಲಿಯ ಆರ್‌ ಕೆ ಮೆಡಿಕಲ್‌ ಸಲ್ಯೂಷನ್‌ ಸಂಸ್ಥೆಯಿಂದ ಕಳಪೆ ಗುಣಮಟ್ಟದ ವೆಂಟಿಲೇರ್‌ಗಳನ್ನು ಖರೀದಿಸಲಾಗಿದೆ.

4) ಸ್ಯಾನಿಟೈಸರ್‌ ಖರೀದಿ: ೫೦೦ ಎಂಎಲ್‌ ಸ್ಯಾನಿಟೈಸರ್‌ ಬಾಟಲ್‌ಗಳನ್ನು 97ರೂಪಾಯಿ 44ಪೈಸೆ ಬೆಲೆಯ ಸ್ಯಾನಿಟೈಸರ್‌ 250 ರೂ.ಕೊಟ್ಟು ಖರೀದಿಸಲಾಗಿದೆ.

5) ಸಿರಿಂಜ್‌ ಖರೀದಿ: ಸಿರಿಂಜ್‌, ಸಿರಿಂಜ್‌ ಮತ್ತು ವೈದ್ಯಕೀಯ ಉಪಕರಣಗಳನ್ನು ಮದ್ರಾಸ್‌ ಸರ್ಜಿಕಲ್ಸ್‌ ಹಾಗೂ ಇತರೆ ಕಂಪನಿಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿದೆ.

ಅಕ್ರಮದ ಬಗ್ಗೆ ದೂರುಗಳು ಬಂದಿರುವ ಬಗ್ಗೆ ಸಾರ್ವಜನಿಕ ಲೆಕ್ಕ ಸಮಿತಿಯ ಮುಖ್ಯಸ್ಥರೂ ಆಗಿರುವ ಕಾಂಗ್ರೆಸ್‌ ಶಾಸಕ ಹೆಚ್‌ ಕೆ ಪಾಟೀಲ್‌ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here